Tollywood : ಮಹೇಶ್ ಬಾಬು – ತ್ರಿವಿಕ್ರಮ್ 3ನೇ ಸಿನಿಮಾ ಸೆಟ್ಟೇರುವುದು ಯಾವಾಗ..???
ಪ್ರಸ್ತುತ ಮಹೇಶ್ ಬಾಬು ಅವರು ಸಾಕಷ್ಟು ಬ್ಯುಸಿಯಿದ್ದು , ಮುಂದೆ ರಾಜಮೌಳಿ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇದೆ… ಮಹೇಶ್ ಬಾಬು ಅವರ ನಟನೆಯ ಸರ್ಕಾರಿ ವಾರು ಪಾಟ ಸಿನಿಮಾ ರಿಲೀಸ್ ಆಗಬೇಕಿದೆ…
ಈ ನಡುವೆ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಮೂರನೇ ಬಾರಿಗೆ ಹೊಸ ಸಿನಿಮಾಗೆ ಒಂದಾಗುತ್ತಿದ್ದಾರೆ. ಅವರ ಹೊಸ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.
ಇನ್ನೂ ಹೆಸರಿಡದ ಈ ಸಿನಿಮಾ ಫೆಬ್ರವರಿ 3 ರಂದು ಹೈದರಾಬಾದ್ ನಲ್ಲಿ ಸೆಟ್ಟೇರಲಿದೆ. ಅಲ್ಲದೇ ಈ ಸಿನಿಮಾದಲ್ಲಿ ಪೂಜಾ ಹೆಗಡೆ ನಾಯಕಿಯಾಲಿದ್ದಾರೆ ಎನ್ನಲಾಗಿದೆ.. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ,…
ಸಿನಿಮಾಗೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ತಮನ್ ಸಂಗೀತ ಸಂಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ಪ್ರಸ್ತುತ ನಿರ್ದೇಶಕ ಪರಶುರಾಮ್ ಅವರ ‘ಸರ್ಕಾರು ವಾರಿ ಪಾತ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಪೂಜಾ ಹೆಗಡೆ ಇತ್ತೀಚೆಗಷ್ಟೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.. ಆಚಾರ್ಯ ಸಿನಿಮಾದಲ್ಲೂ ಕಾಣಿಸಿಕೊಳ್ತಿದ್ದಾರೆ.. ಅವರ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗಲಿದೆ..








