ಧೋನಿಯ ಜೊತೆ ನಿಂತು ಟಾಸ್ ಮಾಡಿದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಡೆಲ್ಲಿ ಡೇರ್ ಡೇವಿಲ್ಸ್ ತಂಡದ ನಾಯಕತ್ವದಿಂದ ಗೌತಮ್ ಗಂಭೀರ್ ಸಡನ್ ಆಗಿ ಕೆಳಗಿಳಿದಿದ್ದರು. ಆಗ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಶ್ರೇಯಸ್ ಅಯ್ಯರ್ ಹೆಗಲಿಗೆ ಬಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿಯ ಸನೀಹದಲ್ಲಿ ನಿಂತುಕೊಂಡು ಟಾಸ್ ಕೂಡ ಮಾಡಿದ್ರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದ ಶ್ರೇಯಸ್ ಅಯ್ಯರ್.


ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದಾಗ ನನಗೆ ಕೇವಲ ಹತ್ತು ವರ್ಷ. ಈಗ ಟಾಸ್‍ಗಾಗಿ ಅವರ ಎದುರುಗಡೆ ನಿಂತುಕೊಂಡಿದ್ದೇನೆ. ಈ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಧೋನಿ ಆಟವನ್ನು ನೋಡುತ್ತಾ ನಾನು ಬೆಳೆದಿದ್ದೇನೆ. ಮಹಿ ಭಾಯ್ ನನಗೆ ಸ್ಪೂರ್ತಿಯ ಚಿಲುಮೆ ಅಂತ ಟ್ಯಾಗ್ ಲೈನ್ ಹಾಕೊಂಡು ಫೋಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕೊಂಡಿದ್ದರು.
ಒಟ್ಟಿನಲ್ಲಿ ಧೋನಿ ಆಟಗಾರರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಸಮಯದಲ್ಲಿ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ಇದಕ್ಕಾಗಿಯೇ ಧೋನಿಯವರನ್ನು ಟೀಮ್ ಇಂಡಿಯಾದ ಗ್ರೇಟ್ ಲೀಡರ್ ಅಂತ ಕರೆಯುವುದು.








