ತನ್ನ ಟೈಮ್‌ಲೈನ್‌ನಲ್ಲಿ ಜಮ್ಮು ಕಾಶ್ಮೀರವನ್ನು ಚೀನಾದ ಭಾಗವಾಗಿ ತೋರಿಸಿದ ಟ್ವಿಟರ್ – Twitter major controversy
ಹೊಸದಿಲ್ಲಿ, ಅಕ್ಟೋಬರ್ 19: ಟ್ವಿಟರ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರವನ್ನು ಚೀನಾದ ಭಾಗವಾಗಿ ತೋರಿಸಿ ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. Twitter major controversy

ಟ್ವಿಟರ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಭಾನುವಾರ ತನ್ನ ಟೈಮ್‌ಲೈನ್‌ನಲ್ಲಿ ತೋರಿಸಿದೆ.
ಟ್ವೀಟ್‌ಗಳು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದ ಒಂದು ಭಾಗವಾಗಿ ತೋರಿಸಿದ ನಂತರ ಈ ವಿಷಯವನ್ನು ಕಾಂಚನ್ ಗುಪ್ತಾ, ಡಿಸ್ಟಿಂಗ್ವಿಶ್ಡ್ ಫೆಲೋ, ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್ಎಫ್) ಗಮನಿಸಿದ್ದು, ಇದನ್ನು ಬಹಿರಂಗ ಪಡಿಸಿದರು.
ಇದಕ್ಕೆ ಸಂಬಂಧಿಸಿದ ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಟ್ವಿಟರ್ ಭೌಗೋಳಿಕತೆಯನ್ನು ಪುನರ್‌ರಚಿಸಲು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಘೋಷಿಸಲು ನಿರ್ಧರಿಸಿದೆ.
ಲಡಾಖ್ ಗಡಿ ಪ್ರವೇಶಿಸಿದ ಚೀನಾದ ಸೈನಿಕನನ್ನು ಬಂಧಿಸಿದ ಭಾರತೀಯ ಭದ್ರತಾ ಪಡೆ
ಇದು ಭಾರತದ ಕಾನೂನುಗಳ ಉಲ್ಲಂಘನೆಯಾಗದಿದ್ದರೆ, ಏನು?
ಭಾರತದ ನಾಗರಿಕರಿಗೆ ಸಣ್ಣ ಪುಟ್ಟ ವಿಷಯಗಳಿಗೆ ಶಿಕ್ಷೆಯಾಗಿದೆ. ಆದರೆ ಅಮೆರಿಕದ ಬಿಗ್ ಟೆಕ್ ಕಾನೂನು ಮೀರಿದೆ? ಎಂದು ಗುಪ್ತಾ ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಟ್ವಿಟರ್ ಇಂಡಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವಾರು ನೆಟ್ಟಿಗರು ಪ್ರಸಾದ್ ಮತ್ತು ಸರ್ಕಾರವನ್ನು ಕೇಳಿ ಕೊಂಡಿದ್ದಾರೆ
ಟ್ವಿಟರ್ ಇಂಡಿಯಾ ನಿಮ್ಮ ಪ್ರಕಾರ ಲೇಹ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಒಂದು ಭಾಗವಾಗಿದೆ ಎಂದು ನೆಟ್ಟಿಗರು ಟ್ವಿಟ್ಟರ್ ಅನ್ನು ಪ್ರಶ್ನಿಸಿದ್ದಾರೆ.
ದಯವಿಟ್ಟು ಇದನ್ನು ಗಮನಿಸಿ ಸೂಕ್ತವಾಗಿ ಕ್ರಮ ತೆಗೆದುಕೊಳ್ಳಿ. ಈ ಸೋಷಿಯಲ್ ಮೀಡಿಯಾ ದೈತ್ಯರು ತಮ್ಮ ಮೂರ್ಖತನಕ್ಕೆ ಹೊಣೆಗಾರರಾಗಿರುವ ಸಮಯ ಬಂದಿದೆ ಎಂದು ನೆಟಿಜನ್ ಒಬ್ಬರು ಪ್ರಸಾದ್ ಅವರನ್ನು ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

ದಯವಿಟ್ಟು ಈ ಗಂಭೀರ ವಿಷಯವನ್ನು ಅರಿತುಕೊಳ್ಳಿ ಮತ್ತು ಟ್ವಿಟರ್ ಇಂಡಿಯಾ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಿ. ಅವರು ಭಾರತೀಯ ಸಾರ್ವಭೌಮತ್ವವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ದುಷ್ಕೃತ್ಯವನ್ನು ಸಾಮಾನ್ಯೀಕರಿಸಲು ಅವರು ಬಿಡಬೇಡಿ ಎಂದು ಮತ್ತೊಬ್ಬ ನೆಟ್ಟಿಗರು ಒತ್ತಾಯಿಸಿದ್ದಾರೆ.
ಟ್ವಿಟರ್ ಇಂಡಿಯಾ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಇಲ್ಲಿಯವರೆಗೆ ನೀಡಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








