ಬೆಂಗಳೂರಿನ ಚುಕ್ಕಾಣಿ ಹಿಡಿಯಲು ಸರ್ಕಾರ ಹೊಸ ಶಕ್ತಿಶಾಲಿ ಆಡಳಿತ ಮಾದರಿಯನ್ನು ರೂಪಿಸಲು ಮುಂದಾಗಿದೆ. ‘ಗ್ರೇಟರ್ ಬೆಂಗಳೂರು ಗವರ್ನೆನ್ಸ್’ ಹೆಸರಿನಲ್ಲಿ ಹಳೆಯ ವ್ಯವಸ್ಥೆಯಲ್ಲಿ ನವೀಕರಣ ತರುವ ಉದ್ದೇಶದಿಂದ ಮಹತ್ವದ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಈ ಪ್ರಕಾರ, ಬೆಂಗಳೂರು ನಗರ ವ್ಯಾಪ್ತಿಯ ಪ್ರಮುಖ ಭಾಗಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮುಖ್ಯ ಬದಲಾವಣೆಗಳು ಹೀಗಿವೆ:
1. ಮುಖ್ಯಮಂತ್ರಿ ಅಧ್ಯಕ್ಷರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದು ನಿರ್ಧಾರಾತ್ಮಕ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
2. 3 ಹೊಸ ನಗರ ಪಾಲಿಕೆಗಳು:
ಬೆಂಗಳೂರು ನಗರವನ್ನು ತಲಾ 125 ವಾರ್ಡ್ಗಳನ್ನೊಳಗೊಂಡ ಮೂರು ವಿಭಿನ್ನ ನಗರ ಪಾಲಿಕೆಗಳಾಗಿ ವಿಭಜನೆ ಮಾಡಲಾಗುತ್ತದೆ. ಇದರಿಂದ ಸ್ಥಳೀಯ ಆಡಳಿತ ಹೆಚ್ಚು ಪರಿಣಾಮಕಾರಿ ಆಗಲಿದೆ.
3. ಗ್ರೇಟರ್ ಬೆಂಗಳೂರು ಗಡಿನಿರ್ಧಾರ:
ಪ್ರತಿ ನಗರ ಪಾಲಿಕೆಗೂ ನಿಖರವಾದ ಗಡಿಯನ್ನು ನಿರ್ಧರಿಸಲಾಗುತ್ತಿದ್ದು, ಸರ್ವೆ ಹಾಗೂ ಡೆಮಾರ್ಕೇಶನ್ ಕೆಲಸವೂ ಪ್ರಾರಂಭವಾಗಲಿದೆ.
4. ಹೊಸ ಪ್ರದೇಶಗಳ ಸೇರ್ಪಡೆ:
ಈಗಾಗಲೇ ಹೊರವಲಯವಾಗಿ ಪರಿಗಣಿಸಲ್ಪಟ್ಟಿದ್ದ ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿ ಭಾಗಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಇದರಿಂದ ಯೋಜಿತ ವಿಕಾಸ ಸಾಧ್ಯವಾಗಲಿದೆ.
5. ಕಟ್ಟಡ ನಿಯಮಗಳಲ್ಲಿ ಬದಲಾವಣೆ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡಗಳ ಗಾತ್ರ, ಎತ್ತರಕ್ಕೆ ಸಂಬಂಧಿಸಿದ ನಿಲುವುಗಳಲ್ಲಿ ಬದಲಾವಣೆಗೆ ಸಾಧ್ಯತೆ ಇದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನ ಸಂಚಾರದ ದೃಷ್ಠಿಯಿಂದ ಈ ನಿಯಮಗಳ ಪರಿಷ್ಕರಣೆ ಅನಿವಾರ್ಯವಾಗಿದೆ.
6. ಪ್ಲಾನ್ ಪ್ರಮಾಣದಲ್ಲಿ ಕಡಿತ ಸಾಧ್ಯತೆ:
ಹೊಸ ಯೋಜನೆಯ ಪ್ರಕಾರ, ವಸತಿ ಕಟ್ಟಡಗಳ ಪ್ಲಾನ್‌ಗೆ ಶೇಕಡಾ 50% ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇಕಡಾ 25% ಕಡಿತ ತರಲು ಸಾಧ್ಯತೆ ಇದೆ. ಇದು ನಗರದ ಇನ್‌ಫ್ರಾಸ್ಟ್ರಕ್ಚರ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ.
ನಗರ ಅಭಿವೃದ್ದಿಗೆ ಹೊಸ ಚಟುವಟಿಕೆಗಳ ದಿಕ್ಕಿನಲ್ಲಿ ಹೆಜ್ಜೆ:
ಈ ಬದಲಾವಣೆಗಳ ಮೂಲಕ ಸರ್ಕಾರ ಬೆಂಗಳೂರು ನಗರಾಭಿವೃದ್ಧಿಗೆ ಹೊಸ ರೂಪ ನೀಡಲು ಉದ್ದೇಶಿಸಿದೆ. ಮೂಲಸೌಕರ್ಯಗಳ ಸುಧಾರಣೆ, ಸಂಚಾರ ವ್ಯವಸ್ಥೆ, ಸ್ಮಾರ್ಟ್ ನಗರ ಯೋಜನೆ, ಕುಡಿಯುವ ನೀರು ಹಾಗೂ ಗಟಾರ್ ವ್ಯವಸ್ಥೆಗಳನ್ನು ಹೆಚ್ಚಿನ ಪರಿಣಾಮಕಾರಿತ್ವದಿಂದ ನಿರ್ವಹಿಸಲು ಈ ವ್ಯವಸ್ಥೆ ನೆರವಾಗಲಿದೆ.
ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಸಲಹೆ, ಸಾರ್ವಜನಿಕ ಸಮಾಲೋಚನೆಗಳ ನಂತರ ಈ ಬದಲಾವಣೆಗಳು ಅಧಿಕೃತ ರೂಪ ಪಡೆಯಲಿವೆ.








