ದಾಸನಿಗೆ ವಂಚನೆ ಕೇಸ್ ಗೆ ಮೇಜರ್ ಟ್ವಿಸ್ಟ್ : ಮತ್ತೊಂದು ಆಡಿಯೋ ಬ್ಲಾಸ್ಟ್
ಮೈಸೂರು : ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಎನ್ನುವಂತಾಗಿದೆ.
ನಿನ್ನೆ ದರ್ಶನ್ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಚೆಂಡನ್ನು ಉಮಾಪತಿ ಅಂಗಳಕ್ಕೆ ಎಸೆದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೋ ವೈರಲ್ ಆಗಿದೆ. ಇದರಲ್ಲಿ ಮಲ್ಲೇಶ್ ಎಂಬ ಹೆಸರು ಕೇಳಿಬಂದಿದೆ.
ಈ ಹೊಸ ಆಡಿಯೋದಲ್ಲಿ ದರ್ಶನ್ ಸ್ನೇಹಿತರ ಬಳಿ ಆರೋಪಿ ಅರುಣಾ ಕುಮಾರಿಯನ್ನು ಕಳುಹಿಸಿದ್ದು ನಿರ್ಮಾಪಕ ಅಲ್ಲ ಎನ್ನುತ್ತಿದೆ.
ಸದ್ಯ ಅರುಣಾ ಕುಮಾರಿ ಹಾಗೂ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ ಜತೆಗಿನ ಮೊಬೈಲ್ ಸಂಭಾಷಣೆ ಸದ್ಯ ವೈರಲ್ ಆಗಿದೆ.
ಅದರಲ್ಲಿ ಮಲ್ಲೇಶ್ ಎಂಬುವರು ನನ್ನನ್ನು ಕಳುಹಿಸಿದ್ರು ಎಂದು ಅರುಣಾ ಕುಮಾರಿ ಹೇಳಿದ್ದು, ಉಮಾಪತಿಯನ್ನು ನಾನೇ ಸಂಪರ್ಕ ಮಾಡಿದ್ದೆ ಎಂದಿದ್ದಾರೆ.
ಉಮಾಪತಿ ಅವರು ದರ್ಶನ್ ಸ್ನೇಹಿತರು ಎನ್ನುವ ಕಾರಣಕ್ಕೆ ಭೇಟಿ ಮಾಡಿದ್ದೆ. ಅವರ ಮೂಲಕ ದರ್ಶನ್ ಭೇಟಿಯಾಗಬಹುದು ಎಂಬ ಕಾರಣಕ್ಕೆ ಸಂಪರ್ಕ ಮಾಡಿದೆ.
ಉಮಾಪತಿ ಸಹೋದರ ದೀಪು ಕೂಡ ನನಗೆ ಗೊತ್ತಿಲ್ಲ ಎಂದು ಅರುಣಾ ಕುಮಾರಿ ಹೇಳಿರುವುದು ಆಡಿಯೋದಲ್ಲಿದೆ.
ಈ ಹೊಸ ಆಡಿಯೋದಿಂದ ಪ್ರಕರಣದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ. ಹಾಗಿದ್ರೆ ದರ್ಶನ್ ಸ್ನೇಹಿತರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದು
ಯಾರು? ದರ್ಶನ್ ಹೇಳಿದ ಆ ಹಿಂದಿರುವ ವ್ಯಕ್ತಿ ಯಾರು ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.