1. 3ನೇ ಅಲೆ ಬಂದಿದೆ
ರಾಜ್ಯಕ್ಕೆ ಮೂರನೇ ಅಲೆ ಈಗಾಗಲೇ ಬಂದಿದೆ. ಇದು ಮೂರನೇ ಅಲೆಯ ಪ್ರಾರಂಭದ ಹಂತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು ಸೇರಿದಂತೆ ದೆಹಲಿ, ಮಹಾರಾಷ್ಟ್ರದಲ್ಲೂ ಕೇಸ್ ಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿಗೆ ವಿಶೇಷ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ ಎಂದಿದ್ದಾರೆ.
2. ವೀಕೆಂಡ್ ಕರ್ಫ್ಯೂ
ದೇಶದಲ್ಲಿ ನೋಡ ನೋಡುತ್ತಿದ್ದಂತೆ ಕೊರೊನಾ ಮೂರನೇ ಅಲೆ ಅಬ್ಬರಿಸಲು ಶುರುಮಾಡಿದೆ. ದೆಹಲಿಯಲ್ಲಿ ಹೆಮ್ಮಾರಿ ಸೋಂಕು ಅಬ್ಬರಿಸುತ್ತಿದ್ದು, ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ಮುಂದಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಡೆಲ್ಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಶನಿವಾರ ಕರ್ಫ್ಯೂ ಹೇರಿ, ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಮಾಡಲು ಕೇಜ್ರಿವಾಲ್ ಸರ್ಕಾರ ಚಿಂತನೆ ನಡೆಸಿದೆ.
03 . ಚೀನಾ ಗೆ ಎದುರೇಟು – ಗಲ್ವಾನ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸೇನೆ…
ಹೊಸ ವರ್ಷದ ಆರಂಭದಲ್ಲಿ ಚೀನಾ ಸೇನೆ ಗಲ್ವಾನ್ ಕಣಿವೆಯಲ್ಲಿ ಧ್ವಜ ಹಾರಿಸಿ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿತ್ತು. ಇದಕ್ಕೆ ತಿರುಗೇಟು ನಿಡಲು ಭಾರತ ಸಹ ಇಂದು ಗಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ. 30 ಶಸ್ತ್ರಸಜ್ಜಿತ ಭಾರತೀಯ ಸೈನಿಕರನ್ನ ಗಲ್ವಾನ್ ಕಣಿವೆಯಲ್ಲಿ ನಿಯೋಜಿಸಲಾಗಿದೆ.
04. ಪಾದಯಾತ್ರೆ ನಿಲ್ಲಲ್ಲ
ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.
05. ಯಾರೋಬ್ಬರ ಸ್ವತ್ತಲ್ಲ
ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ‘ಡಿಸೈನ್ ವೀರರಿಗೆ’ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ ಅಲ್ಲವೇ ಎಂದು ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಡಿ.ಕೆ.ಬ್ರದರ್ಸ್ ಅವರನ್ನ ಗುರಿಯಾಗಿಸಿಕೊಂಡು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
06. ಕೋವಿಡ್ ಮಹಾಸ್ಪೋಟ
ಭಾರತದಲ್ಲಿ ಮಂಗಳವಾರ 37,379 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ದಿನಕ್ಕಿಂತ 10.75% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಂಚಿಕೊಂಡ ಬುಲೆಟಿನ್ ತಿಳಿಸಿದೆ. 2021 ರ ಸೆಪ್ಟೆಂಬರ್ ತಿಂಗಳ ನಂತರ ಅತಿಹೆಚ್ಚು ಕೋವಿಡ್ ಪ್ರಕರನಗಳು ಜನವರಿ 3 ರಂದು ವರದಿಯಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿ ಕ್ರಮವಾಗಿ 568 ಮತ್ತು 382 ಸೋಂಕುಗಳೊಂದಿಗೆ ಭಾರತದ ಓಮಿಕ್ರಾನ್ ಸಂಖ್ಯೆಯಲ್ಲಿ ಮೊದಲೆರೆಡು ಸ್ಥಾನದಲ್ಲಿವೆ.
07. ‘ಬಡವ ರಾಸ್ಕಲ್’ ಸೂಪರ್..!!
ಪ್ರಶಾಂತ್ ನೀಲ್ ಸ್ಯಾಂಡಲ್ ವುಡ್ ನ ಪ್ರಾಮಿಸಿಂಗ್ ನಟ ಡಾಲಿ ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ “ ಬಡವ ರಾಸ್ಕಲ್ “ ನನ್ನ ಕೊಂಡಾಡಿದ್ದಾರೆ.. ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ ‘ಬಡವ ರಾಸ್ಕಲ್’ ಅನ್ನು ಪ್ರಶಾಂತ್ ನೀಲ್ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಅಲ್ಲದೇ ”2021 ಎಲ್ಲರಿಗೂ ರೋಲರ್ ಕೋಸ್ಟರ್ ರೈಡ್ ರೀತಿ ಇತ್ತು. ಈ ವರ್ಷದಲ್ಲಿ ಏರು-ಇಳಿತ ಎಲ್ಲವೂ ಇತ್ತು. ಆ ವರ್ಷ ‘ಬಡವ ರಾಸ್ಕಲ್’ ಅಂಥ ಒಳ್ಳೆಯ ಸಿನಿಮಾದೊಂದಿಗೆ ಕೊನೆಯಾಗಿದ್ದು ಖುಷಿಯ ವಿಷಯ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರತಿಭಾನ್ವಿತ ಧನಂಜಯ್ಗೆ ಅಭಿನಂದನೆಗಳು, ಜೊತೆಗೆ ನಟಿ ಅಮೃತಾ ಐಯ್ಯಂಗಾರ್, ನಿರ್ದೇಶಕ ಶಂಕರ್ ಮತ್ತು ಇಡೀಯ ಚಿತ್ರತಂಡಕ್ಕೆ ಶುಭಾಶಯಗಳು” ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.
08. ‘ನಮಸ್ತೇ ಘೋಸ್ಟ್’ ನಲ್ಲಿ ಕಿಚ್ಚ..?
ಕಿಚ್ಚ ಸುದೀಪ್ ‘ಸಾಹೋ’ ಖ್ಯಾತಿಯ ನಿರ್ದೇಶಕ ಸುಜಿತ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಇದು ಸಿಕ್ಕಾಪಟ್ಟೆ ಕುತೂಹಲದ ಜೊತೆಗೆ ಕನ್ಫ್ಯೂಸ್ ಕೂಡ ಮಾಡ್ತಿದೆ.. ಸುದೀಪ್ ಮೇಣದ ಬತ್ತಿ ಹಿಡಿದು ನಿಂತಿರುವ ಫೋಟೋ ಜೊತೆಗೆ “ ನಮಸ್ಥೆ ಘೋಸ್ಟ್” ಟೈಟಲ್ ಕೂಡ ವೈರಲ್ ಆಗ್ತಿದೆ… ಜೊತೆಗೆ ಜೀ ಸ್ಟುಡಿಯೋಸ್ ನಿರ್ಮಾಣ ಮಾಡ್ತಿದ್ದು , ದಿಶಾ ಪಠಾನಿ , ಇಮ್ರಾನ್ ಹಶ್ಮಿ , ದೀಪಿಕಾ ಪಡುಕೋಣೆ ಹೆಸರುಗಳು ಕೂಡ ಸಿನಿಮಾದ ಕಾಸ್ಟ್ ಅಂಡ್ ಕ್ರೀವ್ ನಲ್ಲಿ ಕೇಳಿ ಬರುತ್ತಿದೆ..
ಆದ್ರೆ ಅಸಲಿಗೆ ಈ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಆಗ್ಲೀ , ಸುಜಿತ್ ಆಗ್ಲೀ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.. ಬದಲಾಗಿ ಹೀಗೊಂದು ಗಾಸಿಪ್ ಹರಿದಾಡ್ತಿದೆ.. ಅದಕ್ಕೆ ಕಾರಣ ಅಭಿಮಾನಿಗಳೇ ಕ್ರಿಯೇಟ್ ಮಾಡಿ ಫೇಕ್ ಟೈಟಲ್ ನೀಡಿ ಹರಿಬಿಟ್ಟಿದ್ದಾರೆ ಎನ್ನಲಾದ ಪೋಸ್ಟರ್.. ಅದ್ರ ಜೊತೆಗಿನ ಟ್ಯಾಗ್ಸ್.. ಆದ್ರೆ ಈ ಸುದ್ದಿ ನಿಜ ಅಲ್ಲ ಫ್ಯಾನ್ ಮೇಡ್ ವದಂತಿ ಅಷ್ಟೇ..
09. ‘ವಿಲ್ಲನ್ ಪಾತ್ರಕ್ಕೆ ವಿಜಿ ಹೊಸ ವ್ಯಾಖ್ಯಾನ’..!
ಸಲಗ ಸಕ್ಸಸ್ ನಂತರ ದುನಿಯಾ ವಿಜಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ .. ನಿರ್ದೇಶಕನಾಗಿ ಸಕ್ಸಸ್ ಕಂಡ ಬೆನ್ನಲ್ಲೇ ಇದೀಗ ಟಾಲಿವುಡ್ ನಲ್ಲಿ ನಟ ಬಾಲಕೃಷ್ಣ ಸಿನಿಮಾದಲ್ಲಿ ವಿಲ್ಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುನಿಯಾ ವಿಜಿ.. ಇದಕ್ಕಾಗಿ ಅವರು ತಮ್ಮ ಕಂಪ್ಲೀಟ್ ಲುಕ್ ಚೇಂಜ್ ಮಾಡಿಕೊಂಡಿದ್ದು, ಹೆಸರಿಡದ ಬಾಲಯ್ಯ ನಟನೆಯ 107ನೇ ಸಿನಿಮಾದಲ್ಲಿ ದುನಿಯಾ ವಿಜಿ ನಟಿಸುತ್ತಿರುವ ವಿಚಾರವನ್ನ ಮೈತ್ರಿ ಮೂವೀಸ್ ಅಧಿಕೃತಗೊಳಿಸಿದೆ.. ಅಲ್ಲದೇ ಈ ಬಗ್ಗೆ ಟ್ವೀಟ್ ಮಾಡಿರೋ ಬಾಲಯ್ಯ ದುನಿಯಾ ವಿಜಿ ಖಳನಾಯಕನ ಪಾತ್ರಕ್ಕೆ ಹೊಸ ವ್ಯಾಖ್ಯಾನ ಎಂದಿದ್ದಾರೆ..
10. ODI ಗೆ ಕೊಹ್ಲಿ ದೂರ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಆಘಾತ ಎದುರಾಗುವ ಸಾಧ್ಯತೆ ಇದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಮಧ್ಯೆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ವಿರಾಟ್ ಕೊಹ್ಲಿ ಅಲಭ್ಯರಗಾಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರಂತೆ.