WHMO ನಿರ್ದೇಶಕ ಸ್ಥಾನಕ್ಕೆ ಮಜು ರಾಜೀನಾಮೆ
ವೈಟ್ ಹೌಸ್ ಮಿಲಿಟರಿ ಆಫಿಸ್ ಡೈರೆಕ್ಟರ್ ಪದವಿಗೆ ಭಾರತೀಯ ಮೂಲದ ಮಜು ವರ್ಗೀಸ್ ರಾಜೀನಾಮೆ ನೀಡಿದ್ದಾರೆ.
ವ್ಯಕ್ತಿಗತ ಕಾರಣಗಳಿಂದ ಈ ಪದವಿಗೆ ರಾಜೀನಾಮೆ ನೀಡುತ್ತಿರುವುದಾಗಿ, ಈ ಹುದ್ದೆಯನ್ನು ನಿರ್ವಹಿಸಿದ್ದು ತಮಗೆ ಹೆಮ್ಮೆ ಎನಿಸುತ್ತಿದೆ ಎಂದು ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ವೇತಭವನದ ಅಧಿಕಾರಿಗಳು ಮಜು ಅವರ ಕೆಲಸದ ವೈಖರಿಗೆ ಪ್ರಸಂಶಿಸಿದ್ದಾರೆ.
ಮಜು ಅವರು ಈ ಹಿಂದೆ ಒಬಾಮಾ ಆಡಳಿತದಲ್ಲಿಯೂ ಸೇವೆ ಸಲ್ಲಿಸಿದ್ದರು. ಮಜು ರಾಜೀನಾಮೆಯಿಂದ ತೆರವಾದ ಈ ಹುದ್ದೆಗೆ ಯಾರನ್ನು ನೇಮಕ ಮಾಡಲಾಗಿದೆ ಎಂಬುದನ್ನ ಶ್ವೇತಭವನ ಇನ್ನೂ ನಿರ್ಧರಿಸಿಲ್ಲ.
ಮಜು ಅವರುಯ ವೃತ್ತಿಯಲ್ಲಿ ವಕೀಲರಾಗಿದ್ದು,. ಇವರ ತಂದೆ ತಾಯಿಯ ಸ್ವಸ್ಥಳ ಕೇರಳ ಆಗಿದೆ.