ಬೆಳಗಾವಿ: ರಾಜ್ಯದಲ್ಲಿ ನಿಮ್ಮದೇ ಸಮುದಾಯದ ಸರ್ಕಾರವಿದೆ. ಹೀಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಮುರುಗೇಶ್ ನಿರಾಣಿ ಕೊಡಿಸಲಿ, ಇಲ್ಲದಿದ್ದರೆ ಮುಂದಿನ ಭಾರಿ ಕಾಂಗ್ರೆಸ್ ಸರ್ಕಾರ ಬಂದೆ ಬರುತ್ತೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸವಾಲು ಹಾಕಿದ್ದಾರೆ.
ಬೆಳಗಾವಿಯ ಸುವರ್ಣಸೌಧ ಎದುರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಲಕ್ಷ್ಮಿ ಹೆಬ್ಬಾಳಕರ್, ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸಲು ಮುರುಗೇಶ್ ನಿರಾಣಿ ವಿಫಲರಾದರೆ ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬರುತ್ತೆ. ಕಾಂಗ್ರೆಸ್ ಸರ್ಕಾರ ಬಂದರೆ ಮೀಸಲಾತಿ ಪಕ್ಕಾ. ಇದು ಅಣ್ಣನಿಗೆ ತಂಗಿ ಹಾಕುತ್ತಿರುವ ಸವಾಲ್ ಎಂದು ಟಾಂಗ್ ನೀಡಿದ್ದಾರೆ.
ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು. ಈ ಪ್ರಯತ್ನದಲ್ಲಿ ಮಾಜಿ ಸಚಿವರೂ ಆದ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಮುಂದಾಳತ್ವ ವಹಿಸಬೇಕು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಾನು ನಿಮ್ಮ ಮನೆಗೆ ಬೆಳಗಾವಿಯಿಂದ ಕುಂದಾ ತಂದು ತಿನ್ನಿಸುತ್ತೇನೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ನಾನು ಮಾಡಿಸುವೆ, ಆಗ ನೀವು ನನ್ನ ಮನೆಗೆ ಬಂದು ಎರಡು ಬಂಗಾರದ ಬಳೆ ನೀಡಬೇಕು ಎಂದು ನಗುತ್ತಲೇ ಚಟಾಕಿ ಹಾರಿಸಿದ್ದಾರೆ.
ನಾವು ರಾಜಕಾರಣಿಗಳು, ಹೋರಾಟಗಳ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ನಮ್ಮ ಪಂಚಮಸಾಲಿ ಸಮುದಾಯದ ಪರ ನನ್ನ ಹೋರಾಟ ಎಂದರೆ ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಸ್ಫೂರ್ತಿಯಾಗಿದೆ. ಪಂಚಮಸಾಲಿ ಸಮುದಾಯದ ಬೆವರಿನ ಹನಿಗೆ ನ್ಯಾಯ ದೊರಕೇ ದೊರಕುತ್ತದೆ. ನಾವು ಬೇರೆ ಸಮುದಾಯದ ಅಧಿಕಾರವನ್ನು ಕಿತ್ತುಕೊಂಡಿಲ್ಲ, ಹಕ್ಕಿನ ಬಗ್ಗೆ ಅಸಹ್ಯವನ್ನೂ ಪಟ್ಟಿಲ್ಲ, ಬೇರೆ ಸಮಾಜದ ಹೋರಾಟಗಳಿಗೆ ಬೆಂಬಲ ನೀಡಿದ್ದೇವೆ. ಇದು ಪಂಚಮಸಾಲಿ ಲಿಂಗಾಯತ ಸಮಾಜದ ಗುಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಬಣ್ಣಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel