ಮುಸ್ಲಿಂ ಮಹಿಳೆಯರಿಗೆ ವಿರುದ್ಧ ಪಕ್ಷಪಾತ ಮಾಡುವುದು ಅನ್ಯಾಯ : ನಟಿ ಝೈರಾ ವಾಸಿಮ್ Saaksha Tv
ನವದೆಹಲಿ: ಮುಸ್ಲಿಂ ಮಹಿಳೆಯರಿಗೆ ವಿರುದ್ಧ ಪಕ್ಷಪಾತ ಮಾಡುವುದು, ಹಿಜಾಬ್ ವಿಚಾರಕ್ಕೆ ಶಿಕ್ಷಣವನ್ನು ನಿರಾಕರಿಸುವುದು ಅನ್ಯಾಯವಾಗಿದೆ ಎಂದು ಬಾಲಿವುಡ್ ನಟಿ ಝೈರಾ ವಾಸಿಮ್ ಹೇಳಿದ್ದಾರೆ.
ರಾಜ್ಯದಲ್ಲಿ ಬುಗಿಲೆದ್ದ ಹಿಜಾಬ್ ವಿವಾದ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಈ ಕುರಿತು ಟ್ವಿಟ್ ಮಾಡಿದ ಬಾಲಿವುಡ್ ನಟಿ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಇದೆಲ್ಲವೂ ನಡಡೆಯುತ್ತಿರುವುದು ದುಃಖ ತಂದಿದೆ. ಹಿಜಾಬ್ ತಮ್ಮ ತಮ್ಮ ಆಯ್ಕೆ ಎಂಬುವುದು ತಪ್ಪು ತಿಳಿವಳಿಕೆ ಹೊಂದಿದೆ. ಹಿಜಾಬ್ ಇಸ್ಲಾಂನಲ್ಲಿ ಒಂದು ಆಯ್ಕೆಯಲ್ಲ. ಆದರೆ ಒಂದು ಜವಾಬ್ದಾರಿಯಾಗಿದೆ. ಹಿಜಾಬ್ ಧರಿಸಿದ ದೇವರು ವಿಧಿಸಿರುವ ಕಟ್ಟುಪಾಡಡುಗಳನ್ನು ಪೂರೈಸುತ್ತಾಳೆ ಎಂದು ನಟಿ ಹೇಳಿದ್ದಾರೆ.
ನಾನು ಕೂಡಾ ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ನ್ನು ಧರಿಸಿರುತ್ತೇನೆ.ಕೇವಲ ಧಾರ್ಮಿಕತೆಯ ಕಾರದಿಂದ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವ ಈ ವ್ಯವಸ್ಥೆಯನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ಹೇಳಿದರು.









