ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ malai mahadeshwara saaksha tv
ಚಾಮರಾಜನಗರ : ಮಲೈ ಮಹದೇಶ್ವರದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಮಹದೇಶ್ವರನ ಹುಂಡಿಯಲ್ಲಿ 2.27 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕೊರೊನಾ ಸೋಂಕು ಇತ್ಯಾದಿಗಳಿಂದಾಗಿ ಭಾರಿ ಸಂಷ್ಟಕ್ಕೆ ಸಿಲುಕಿದ್ದ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಮತ್ತೆ ಕಾಂಚಾಣದ ವೈಭವ ಮುರುಕಳಿಸಿದೆ.
ಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ.
ಹುಂಡಿಯಲ್ಲಿ 2,27,66,834 ರೂ ನಗದು ಜೊತೆಗೆ 59 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿ ಸಂಗ್ರಹವಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ತಡರಾತ್ರಿಯ ವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಮೊತ್ತದ ಬಗ್ಗೆ ವಿವರಣೆ ನೀಡಲಾಗಿದೆ.









