ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhanaa Ram) ಅವರು ನಟಿಸಿರುವ ‘ಕಾಟೇರ’ (Katera) ಚಿತ್ರ ಇಂದು ಬಿಡುಗಡೆಯಾಗಿದೆ. ದರ್ಶನ್ಗೆ (Darshan) ಜೋಡಿಯಾಗಿ ಪ್ರಭಾ ಪಾತ್ರಕ್ಕೆ ಆರಾಧನಾ ಜೀವ ತುಂಬಿದ್ದಾರೆ. ಆದರೆ, ಮಕಳ ನಟನೆ ಕಂಡು ಮಾಲಾಶ್ರೀ ಮುತ್ತಿಟ್ಟು ಕಣ್ಣೀರು ಸುರಿಸಿದ್ದಾರೆ.
‘ಕಾಟೇರ’ ಸಿನಿಮಾವನ್ನು ಮಗಳ ಜೊತೆಯೇ ಮಾಲಾಶ್ರೀ (Malashree) ವೀಕ್ಷಿಸಿ ಸಿನಿಮಾದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಖುಷಿ ಆಗಿದೆ. ಮಗಳ ನಟನೆ ಕಂಡು ಏನು ಹೇಳಬೇಕು ಎಂಬುವುದು ಗೊತ್ತಾಗುತ್ತಿಲ್ಲ. ಒಂದೇ ಸಿನಿಮಾದಲ್ಲಿ ಎಲ್ಲಾ ತರಹ ನಟಿಸಿ ತೋರಿದ್ದಾಳೆ. ತುಂಬಾ ಖುಷಿಯಾಗುತ್ತಿದೆ. ಅವಳಿಗೆ ಸಿನಿಮಾರಂಗದಲ್ಲಿ ಫ್ಯೂಚರ್ ಇದೆ ಎಂದು ಮಾಲಾಶ್ರೀ ಕಣ್ಣೀರು ಸುರಿಸಿದ್ದಾರೆ.
ಮಗಳ ನಟನೆಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೀನಿ. ಎಲ್ಲಾ ದೃಶ್ಯಕ್ಕೂ ಜೀವ ತುಂಬಿದ್ದಾಳೆ. ಹೆಮ್ಮೆ ಆಗುತ್ತಿದೆ ಎಂದು ಮಗಳಿಗೆ ಮಾಲಾಶ್ರೀ ಮುತ್ತಿಟ್ಟಿದ್ದಾರೆ. ಸಂತಸ ವ್ಯಕ್ತಪಡಿಸಿರುವ ನಟಿ, ಕಾಟೇರ ಬಿಗ್ ಪ್ರಾಜೆಕ್ಟ್ನಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.