ಕೊರೊನಾ ಟೈಮ್ ನಲ್ಲಿ ಮಾಲ್ಡೀವ್ಸ್ ನಲ್ಲಿ ಮಜಾ ಮಾಡ್ತಿದ್ದ ಸೆಲೆಬ್ರಿಟಿಗಳನ್ನ ಬ್ಯಾನ್ ಮಾಡಿದ ಮಾಲ್ಡೀವ್ಸ್ ಸರ್ಕಾರ..!
ಒಂದೆಡೆ ಕೊರೊನಾ ರಣಕೇಕೆ… ಎಲ್ಲಿ ನೋಡಿದ್ರು ಸಾವು ನೋವು.. ಬೆಟ್ ಕೊರೆತೆ, ಆಕ್ಸಿಜನ್ ಕೊರತೆ.. ಬಡ ಬಗ್ಗರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಪ್ರಸ್ತುತ ಭಾರತದಲ್ಲಿದೆ. ಆದ್ರೆ ಕೆಲ ಸೋ ಕಾಲ್ಡ್ ಬಾಲಿವುಡ್ ನ ಸೆಲೆಬ್ರಿಟಿಗಳಿಗೆ ಇದ್ಯಾವುದರ ಚಿಂತೆಯೇ ಇಲ್ಲ.. ಕೊರೊನಾ ಸಂಕಷ್ಟ ಎದುರಾಗ್ತಿದ್ದಂತೆ ದೇಶ ಬಿಟ್ಟು ವಿದೇಶಗಳಿಗೆ ಪರಾರಿಯಾಗಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನ ಕೆರಳಿಸಿದೆ. ಅಂತಹ ಸೆಲೆಬ್ರಿಟಿಗಳನ್ನ ಟ್ರೋಲ್ ಮೇಲೆ ಟ್ರೋಲ್ ಮಾಡಿ ಟೀಕಿಸುತ್ತಿದ್ದಾರೆ.
ಇದೀಗ ಇಂತಹ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಶಾಕ್ ನೀಡಿದೆ. ಮುಂಬೈನಲ್ಲಿ ಜನತಾ ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಅನೇಕ ಕಲಾವಿದರು ಮಾಲ್ಡೀವ್ಸ್‌ಗೆ ಹಾರಿದ್ದರು. ರಣಬೀರ್ ಕಪೂರ್, ಅಲಿಯಾ ಭಟ್, ಜಾಹ್ನವಿ ಕಪೂರ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್ ಸೇರಿದಂತೆ ಬಹುತೇಕ ಬಾಲಿವುಡ್ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.
ಇದೀಗ ಸೆಲೆಬ್ರಿಟಿಗಳಿಗೆ ಶಾಕ್ ನೀಡಿದೆ ಮಾಲ್ಡೀವ್ಸ್. ಅಲ್ಲಿನ ಸರ್ಕಾರ ಮಾಲ್ಡೀವ್ಸ್ ದ್ವೀಪಕ್ಕೆ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾದಿಂದ ಈಗಾಗಲೇ ಜರ್ಮನಿ, ಇಟಲಿ, ಸಿಂಗಾಪುರ್ ಸೇರಿದಂತೆ ಕೆಲವು ದೇಶಗಳು ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದೀಗ ಮಾಲ್ಡೀವ್ಸ್ ಕೂಡ ನಿರ್ಬಂಧಿಸಿದೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯವು ಭಾರತೀಯರ ಪ್ರವಾಸವನ್ನು ನಿರ್ಬಂಧಿಸುವುದಾಗಿ ಹೇಳಿ ಟ್ವೀಟ್ ಮಾಡಿದೆ. ‘ಏಪ್ರಿಲ್ 27ರಿಂದ ಭಾರತದಿಂದ ಮಾಲ್ಡೀವ್ಸ್ ದ್ವೀಪಗಳಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳುವ ಸೌಲಭ್ಯವನ್ನು ನಿರ್ಬಂಧಿಸಿದೆ. ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸಲು ನೀಡಿದ ಬೆಂಬಲಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದೆ.







