Politics : ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಜೊತೆಗೆ ಶಿವರಾತ್ರಿ ಕಾಯ೯ಕ್ರಮಗಳ ಪೂವ೯ಸಿದ್ದತೆ ಕುರಿತು ವಿ ಸೋಮಣ್ಣ ಸಭೆ
ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2022ನೇ ಸಾಲಿನಲ್ಲಿ ನಡೆಯಲಿರುವ ಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಕಾಯ೯ಕ್ರಮಗಳ ಪೂವ೯ಸಿದ್ದತೆ ಕುರಿತು ಮುಜರಾಯಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಜೊತೆಗೆ ವಸತಿ , ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆದಿದೆ.
ಮೊದಲಿಗೆ ಜಾತ್ರೆಯ ಕಾಯ೯ಕ್ರಮಗಳ ಪ್ರಯುಕ್ತ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿಯನ್ನು ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದ ಕಾಯ೯ದಶಿ೯ಗಳಾದ ಶ್ರೀ ಜಯವಿಭವಸ್ವಾಮಿ ಅವರು ಸಭೆಗೆ ನೀಡಿದರು. ನಂತರ ಮಾತನಾಡಿದ ಸಚಿವರು, ಶಿವರಾತ್ರಿ ಸಂದಭ೯ದಲ್ಲಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಸ್ವಾಮಿಯ ದಶ೯ನಕ್ಕೆ ಬರುತ್ತಾರೆ. ದಶ೯ನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅಡೆತಡೆ ಮಾಡಬೇಡಿ. ಅತಿಯಾದ ಪ್ರಚಾರ ನೀಡುವ ಅವಶ್ಯಕತೆ ಇಲ್ಲ, ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಕಾಯ೯ಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಿ ಎಂದು ಸೂಚಿಸಿದ್ದಾರೆ…
ಅಲ್ಲದೇ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಮುಖ ರಸ್ತೆಗಳ ದುರಸ್ತಿ ಕುರಿತು ಮಾತನಾಡಿದ ಸಚಿವರು, ಸತ್ತೇಗಾಲ- ಕೊಳ್ಳೆಗಾಲ-ಯಳಂದೂರು-ಸಂತೆಮರಹಳ್ಳಿ- ಚಾಮರಾಜನಗರ ಮತ್ತು ಕೊಳ್ಳೇಗಾಲ-ಮಧುವನಹಳ್ಳಿ-ಹನೂರು-ಶ್ರೀ ಮಲೆಮಹದೇಶ್ವರ ಬೆಟ್ಟ ಮಾಗ೯ದ ರಸ್ತೆಗಳಲ್ಲಿರುವ ಗುಂಡಿಗಳು ಮತ್ತು ಅಪೂಣ೯ ವಾಗಿರುವ ಕಾಮಗಾರಿಗಳಿಂದ ಸಾವ೯ಜನಿಕರ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದ್ದು ವಿಳಂಬವಿಲ್ಲದಂತೆ ಕೂಡಲೇ ಕಾಯ೯ಪ್ರವೃತ್ತರಾಗಿ ಬೆಟ್ಟದ ಶಿವರಾತ್ರಿ ಜಾತ್ರಾ ಕಾಯ೯ಕ್ರಮಗಳ ಪ್ರಾರಂಭಕ್ಕೂ ಮುನ್ನ ಪೂಣ೯ ಗೊಳಿಸಲು ತಿಳಿಸಿದ್ದಾರೆ.









