ಕೇಂದ್ರ ಸರ್ಕಾರ ಯಾವ ಸರ್ಕಾರಿ ಹುದ್ದೆ ಭರ್ತಿ ಮಾಡ್ತಿಲ್ಲ : ಮಲ್ಲಿಕಾರ್ಜುನ್ ಖರ್ಗೆ
ದೇಶದಲ್ಲಿ ಅಗ್ನಿಪಥ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಕಲಬುರಗಿಯಲ್ಲಿ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ..
ಅಗ್ನಿಪಥ ಯೋಜನೆ ರಕ್ಷಣಾ ಇಲಾಖೆಗೆ ಉಪಯುಕ್ತ ಅಲ್ಲ , ದೇಶದ ರಕ್ಷಣೆಗೆ ಉಪಯುಕ್ತ ಯೋಜನೆ ಅಲ್ಲ , ಕೇವಲ ಕೆಲವು ಜನರಿಗೆ ಟ್ರೈನಿಂಗ್ ನೀಡಿ ನಾಲ್ಕು ವರ್ಷದಲ್ಲಿ ನಿವೃತಿ, ಹೀಗಾದ್ರೆ ಯಾವ ಸೈನಿಕನಿಗೂ ಉತ್ತಮ ತರಬೇತಿ ಆಗಲ್ಲ, ನಾಲ್ಕು ವರ್ಷದಲ್ಲಿ ಅರ್ಧ ಟ್ರೈನಿಂಗ ರಜೆಯಲ್ಲಿ ಕಳೆಯುತ್ತೆ, ನಾಲ್ಕು ವರ್ಷ ಅಂದ್ರೆ ಗುತ್ತಿಗೆ ಆಧಾರ ಅಂದಂಗೆ ಆಗುತ್ತದೆ , ಕೇಂದ್ರ ಸರ್ಕಾರ ಯಾವ ಸರ್ಕಾರಿ ಹುದ್ದೆ ಭರ್ತಿ ಮಾಡ್ತಿಲ್ಲ ಎಂದಿದ್ದಾರೆ..