ವಕ್ಫ್ ಬಿಲ್ ಮಂಡನೆಯ ಮುನ್ನವೇ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ವಿರುದ್ಧ ಗರಂ ಆದ ಖರ್ಗೆ, ನಾನು ವಕ್ಫ್ ಭೂಮಿ ಕಬಳಿಸಿದ್ದಾರೆ ಎಂಬ ಸುಳ್ಳು ಆರೋಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅನುರಾಗ್ ಠಾಕೂರ್ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡರೂ, ಈಗಾಗಲೇ ಮಾಧ್ಯಮಗಳಲ್ಲಿ ಈ ಮಾತು ಪ್ರಕಟವಾಗಿದೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಷ್ಪಾ ಶೈಲಿಯಲ್ಲಿ ಖರ್ಗೆಯವರ ಖಡಕ್ ಉತ್ತರ
ಅನುರಾಗ್ ಠಾಕೂರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಖರ್ಗೆ, ಇಂತಹ ರಾಜಕೀಯ ದಾಳಿಗಳಿಗೆ ನಾನು ಬೆದರುವ ಮಾತೇ ಇಲ್ಲ ಎಂದು ಪುಷ್ಪಾ ಸಿನಿಮಾದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನನ್ನ ಜೀವನ ತೆರೆದ ಪುಸ್ತಕ, ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಕಲೆ ಇಲ್ಲ. 60 ವರ್ಷಗಳ ರಾಜಕೀಯ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. ನಾನು ಇಂತಹ ಆಧಾರರಹಿತ ಆರೋಪಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನುರಾಗ್ ಠಾಕೂರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ಅವರು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ನಮ್ಮ ಸಂಸದರು ಈ ಆರೋಪವನ್ನು ತೀವ್ರ ವಿರೋಧಿಸಿದ ನಂತರ ಮಾತ್ರ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು. ಆದರೆ, ಈಗಾಗಲೇ ನನ್ನ ಚಾರಿತ್ರ್ಯ ಮತ್ತು ಗೌರವಕ್ಕೆ ದೊಡ್ಡ ಧಕ್ಕಿ ಉಂಟಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಇಂತಹ ರಾಜಕೀಯ ದಾಳಿಗಳಿಗೆ ತಾವು ಬೆದರಬೇಕಾದ ಅಗತ್ಯವಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು. ನಾನು ನನ್ನ ಆದರ್ಶಗಳನ್ನು ಬಿಟ್ಟು ರಾಜಕೀಯ ಮಾಡಿಲ್ಲ. ನನ್ನ ವಿರುದ್ಧ ಬೇಡದ ಆರೋಪ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಸದನದಲ್ಲಿ ಸ್ಪಷ್ಟವಾಗಿ ಹೇಳಿದರು.