Mallikarjun Kharge | ಕುರ್ಚಿ ಆಸೆಬಿಟ್ಟು ಕೆಲಸ ಮಾಡಿ
ಬೆಂಗಳೂರು : ಪಕ್ಷ ಸಿದ್ಧಾಂತ ನಂಬಿದವರು ಎಂದೂ ಪಕ್ಷ ಬಿಡಲ್ಲ, ಹಾಗಾಗಿ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ.
ಕುರ್ಚಿ ಆಸೆಗಾಗಿ ಕೆಲಸ ಮಾಡಬೇಡಿ ಎಂದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಕಾಂಗ್ರೆಸ್ ಸರ್ವೋದಯ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ, ಕುರ್ಚಿ ಆಸೆಯನ್ನು ಬಿಡಿ ಎಂದು ಕರೆಕೊಟ್ಟರು.
ಅಲ್ಲದೇ ಸ್ವಯಂ ಶಕ್ತಿಯಿಂದ ಮುಂದೆ ಬಂದ್ರೆ ಎಲ್ಲರೂ ಗುರುತಿಸುತ್ತಾರೆ. ನಾನು ವಕೀಲನಾಗಿ ವೃತ್ತಿ ಆರಂಭ ಮಾಡಿದ್ದೆ.
ಆಗ ಕಾಂಗ್ರೆಸ್ ನಾಯಕರ ಸಂಘರ್ಷ ಬೆಳೆದಿತ್ತು. ಆ ಸಮಯದಲ್ಲಿ ಅಧ್ಯಕ್ಷರಾಗಿ ಅಂತಾ ನಾಯಕರು ಕೇಳಿಕೊಂಡರು, ಇಂದಿರಾಗಾಂಧಿ ಅಧಿಕಾರಕ್ಕೆ ಬರ್ತಾರೆ,

ಮುಂದೆ ನೀವು ಅಧಿಕಾರಕ್ಕೆ ಬರ್ಬೇಕು ಅಂತಾ ಪ್ರೋತ್ಸಾಹ ನೀಡಿದರು. ಅವತ್ತು 35 ವರ್ಷದೊಳಗಿನ ಯುವಕರೇ ಸೇರಿ ಪಕ್ಷ ಸಂಘಟನೆ ಮಾಡಿದ್ವಿ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ನಾನು ಒಂದೇ ದಿನಕ್ಕೆ ಅಧ್ಯಕ್ಷನಾಗಿಲ್ಲ,. ಹಂತ ಹಂತವಾಗಿ ಬೆಳೆದು ಅಧ್ಯಕ್ಷನಾಗಿದ್ದೇನೆ. ಆದರೆ ಈಗ ಪಕ್ಷ ಸೇರಿದ ತಕ್ಷಣ ಅಧಿಕಾರ ಬೇಕು ಅಂತಾರೆ,
ಗುರಿ ಇಟ್ಟು ಕೆಲಸ ಮಾಡಿದ್ರೆ ಮಾತ್ರ ಮುಂದೆ ಬರ್ತೀರಾ ಅಂತಾ ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ ಮಲ್ಲಿಕಾರ್ಜುನ್ ಖರ್ಗೆ ಸಲಹೆ ನೀಡಿದರು.








