ನಿವೃತ್ತಿಯಾಗುವ ಮಾತೇ ಇಲ್ಲ, ಉಸಿರು ಇರೋವರೆಗೂ ಜನ ಜತೆ ಇರ್ತೀನಿ
ಕಲಬುರಗಿ : ನಾನು ಕೊನೆಯ ಉಸಿರು ಇರುವವರೆಗೆ ಜನರ ಪರ ಹೋರಾಡುತ್ತಲೇ ಇರುತ್ತೇನೆ. ನಿವೃತ್ತಿಯಾಗುವ ಮಾತೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಇಲ್ಲಿನ ಜನ ನನ್ನನ್ನು ಹನ್ನೊಂದು ಬಾರಿ ಗೆಲ್ಲಿಸಿದ್ದೀರಿ.
ಆದ್ರೆ ಈ ಬಾರಿ ಯಾವುದೋ ಕಾರಣಕ್ಕೆ ಸೋತೆ. ನನ್ನ ಸೋಲಿಗೆ ಕಲಬುರಗಿ ಜನ ಕಾರಣವಲ್ಲ. ಬದಲಿಗೆ ಮೋದಿ, ಶಾ ಹಾಗೂ ಆರ್‌ಎಸ್‌ಎಸ್‌ನವರು ಕುತಂತ್ರ ಕಾರಣ ಎಂದು ದೂರಿದರು.
ಇನ್ನು ದಿನ ದಲಿತರು ಒಂದಾಗುವುದನ್ನು ಬಿಜೆಪಿ ಸಹಿಸುವುದಿಲ್ಲ. ಮೋದಿ, ಯೋಗಿ ಅವರು ದಲಿತರಿಗೆ ಹಿಂದುಳಿವರ್ಗದ ಎಷ್ಟು ಜನರಿಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲಾ ಜನಾಂಗದ ನಾಯಕರಿಗೆ ಮಹತ್ವದ ಖಾತೆ ಕೊಡಲಾಗಿತ್ತು.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ. ಆರ್ಟಿಕಲ್ 371 ಜೆ ದಂತಹ ಪ್ರಮುಖ ಬದಲಾವಣೆಯನ್ನು ಕಾಂಗ್ರೆಸ್ ತಂದಿದೆ ಎಂದರು.
ಇದೇ ವೇಳೆ ಬೆಲೆ ಏರಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಗರಂ ಆದ ಖರ್ಗೆ, ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ ಇದು ಬಿಜೆಪಿ ಹಾಗೂ ಮೋದಿ ಪ್ರಗತಿ ಎಂದು ಕುಟುಕಿದರು.









