ಮಲೆನಾಡಿಗೂ ಕಾಲಿಟ್ಟ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಾತ್ರೆಯೊಂದರಲ್ಲಿ ಮುಸ್ಲಿಂರು ಜಾತ್ರೆಯಲ್ಲಿ ವ್ಯಾಪಾರ ವಹಿವಾಟಗಳನ್ನು ನಡೆಸುವುದಿಲ್ಲ ಮತ್ತು ನಡೆಸಲು ಬಿಡುವುದಿಲ್ಲ ಎಂದು ಪ್ಲೆಕ್ಸ್ ಹಾಕಿದ್ದಾರೆ.
ಕರಾವಳಿಯಲ್ಲಿ ಬುಗಿಲೆದ್ದ ಮುಸ್ಲಿಂರೊಂದಿಗ ವ್ಯಾಪಾರ ವಹಿವಾಟುಗಳ ನಿಷೇಧ, ಈಗ ಮಲೆನಾಡಿನವರೆಗು ವ್ಯಾಪಸಿದೆ. ಹೌದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಬ್ಯಾನರ್ ಹಾಕಿದ್ದಾರೆ.
ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವ ನಿಮಿತ್ತ ರಥೋತ್ಸವ ನಡೆಯಲಿದೆ. ಮಲೆನಾಡಿನ ಪ್ರಸಿದ್ಧ ದೇವಾಲಯ ಗಳಲ್ಲಿ ಒಂದಾಗಿರುವ ಹಿನ್ನೆಲೆ ಸಾವಿರಾರು ಜನ ಸೇರುವ ನಿರೀಕ್ಷೆಯಿದ್ದು, ಇಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಈಗಾಗಲೇ ಸ್ಥಳೀಯರು ಆಡಳಿತ ಮಂಡಳಿಗೆ ಮನವಿ ನೀಡಿದ್ದರು.
ಇದರ ಬೆನ್ನಲ್ಲೇ ಈಗ ಹಿಂದೂ ಪರ ಬಾಂಧವರ ಹೆಸರಿನಲ್ಲಿ ದೇವಸ್ಥಾನ ಮುಂಭಾಗ ಬ್ಯಾನರ್ ಹಾಕಿ, ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಸಾರಿದ್ದಾರೆ.