ಸಿಂಗೂರಿನಿಂದ ಟಾಟಾ ಅವರನ್ನ ಓಡಿಸಿದ್ದು ನಾನಲ್ಲ ಸಿಪಿಐ(ಎಂ) – ಮಮತಾ
ಪಶ್ಚಿಮ ಬಂಗಾಳದ ಸಿಂಗೂರಿನಿಂದ ಟಾಟಾ ಮೋಟಾರ್ಸ್ ಅನ್ನ ಓಡಿಸಿದ್ದು ನಾನಲ್ಲ ಸಿಪಿಐ(ಎಂ) ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಸಿಲಿಗುರಿಯಲ್ಲಿ ನಡೆದ ‘ಬಿಜಯ ಸಮಿಲ್ಲಾನಿ’ ಅಥವಾ ದುರ್ಗಾ ಪೂಜೆಯ ನಂತರದ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ “ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ನ ನ್ಯಾನೋ ಕಾರು ಕಾರ್ಖಾನೆಗಾಗಿ ಹಿಂದಿನ ಎಡಪಕ್ಷ ಸರ್ಕಾರವು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಜನರಿಗೆ ಹಿಂದಿರುಗಿಸಿದೆ ಎಂದು ಹೇಳಿದರು.
“ನಾನು ಟಾಟಾ ಕಂಪನಿಯನ್ನ ಪಶ್ಚಿಮ ಬಂಗಾಳದಿಂದ ಓಡಿಸಿದ್ದೇನೆ ಎಂದು ಅಪಪ್ರಚಾರ ಮಾಡುವ ಜನರಿದ್ದಾರೆ. ನಾನು ಅವರನ್ನು ಬಲವಂತವಾಗಿ ಓಡಿಸಲಿಲ್ಲ, ಆದರೆ ಅವರನ್ನು ಓಡಿಸಿದ್ದು ಸಿಪಿಐ(ಎಂ)” ಎಂದು ಅವರು ಸರ್ಕಾರಿ ಸಮಾರಂಭದಲ್ಲಿ ಹೇಳಿದರು.
“ನೀವು (ಸಿಪಿಐ(ಎಂ)) ಯೋಜನೆಗಾಗಿ ಜನರಿಂದ ಬಲವಂತವಾಗಿ ಭೂಮಿ ತೆಗೆದುಕೊಳ್ಳಲಾಗಿತ್ತು. ಆ ಭೂಮಿಯನ್ನು ನಾವು ಜನರಿಗೆ ಹಿಂದಿರುಗಿಸಿದ್ದೇವೆ, ನಾವು ಹಲವಾರು ಯೋಜನೆಗಳನ್ನ ಮಾಡಿದ್ದೇವೆ, ಆದರೆ ಯಾರಿಂದಲೂ ಬಲವಂತವಾಗಿ ಯಾವುದೇ ಭೂಮಿಯನ್ನು ತೆಗೆದುಕೊಂಡಿಲ್ಲ, ನಾವೇಕೆ ಬಲವಂತವಾಗಿ ಭೂಮಿಯನ್ನು ತೆಗೆದುಕೊಳ್ಳಬೇಕು? ಇಲ್ಲಿ ಭೂಮಿಯ ಕೊರತೆಯಿಲ್ಲ, ”ಎಂದು ಅವರು ಹೇಳಿದರು.
Mamata Banerjee: CPI(M) not me who drove Tata from Singur








