ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾರು ಅಪಘಾತವಾಗಿದ್ದು, ಸಿಎಂಗೆ ಗಾಯಗಳಾಗಿವೆ.
ಕಾರಿಗೆ ಏಕಾಏಕಿ ಮತ್ತೊಂದು ಕಾರು ಎದುರಾಗಿದ್ದಕ್ಕೆ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಹಿಂಬದಿ ಕುಳಿತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆಯಲ್ಲಿ ಸಿಎಂ ಅವರ ತಲೆಗೆ ಹಾಗೂ ತೋಳಿನ ಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಹಿಂದಿನ ವರ್ಷ ಜೂನ್ ತಿಂಗಳಲ್ಲಿ ಕೂಡ ಸಿಲಿಗುರಿಯ ಸೆವೋಕ್ ಏರ್ ಬೇಸ್‌ನಲ್ಲಿ ತನ್ನ ಹೆಲಿಕಾಪ್ಟರ್‌ನ ತುರ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಉಂಟಾದ ಗಾಯದ ನಂತರ ಬ್ಯಾನರ್ಜಿ ಪ್ರಸ್ತುತ ಅವರ ಎಡ ಮೊಣಕಾಲಿನ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.








