‘ನಾಚಿಕೆ ಇಲ್ಲದ ಪ್ರಧಾನಿ ಮಂತ್ರಿ’ ಕೋವಿಡ್ ನಿರ್ವಹಣೆಯಲ್ಲಿ ವಿಫಲ’ : ಮೋದಿ ವಿರುದ್ಧ ‘ದೀದಿ’ ಕಿಡಿ
ಪಶ್ಚಿಮ ಬಂಗಾಳ : ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದ ಲಸಿಕೆಯ ಅಗತ್ಯ ಪೂರೈಸಲು ಕೇಂದ್ರ ಸರಕಾರ ವಿಫಲವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಲಸಿಕೆ ಖರೀದಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಹೋರ್ಡಿಂಗ್ನಿಂದ ಹಿಡಿದು ಲಸಿಕೆ ಹಾಕಿದ ಪ್ರಮಾಣ ಪತ್ರದವರೆಗೆ ಎಲ್ಲೆಲ್ಲೂ ತನ್ನ ಭಾವಚಿತ್ರ ಮುದ್ರಿಸಿರುವ ನರೇಂದ್ರ ಮೋದಿ ಅವರು ‘ನಾಚಿಕೆ ಇಲ್ಲದ ಪ್ರಧಾನ ಮಂತ್ರಿ’ ಎಂದಿದ್ದಾರೆ.
ಇದೇ ವೇಳೆ ನಾವು ಇದುವರೆಗೆ ಕೇಂದ್ರ ಸರಕಾರದಿಂದ ಲಸಿಕೆಯ 2 ಕೋಟಿ ಡೋಸ್ ಗಳನ್ನು ಸ್ವೀಕರಿಸಿದ್ದೇವೆ. ರಾಜ್ಯದ ಜನಸಂಖ್ಯೆಯನ್ನು ಪರಿಗಣಿಸಿದರೆ, ನಾವು ಸ್ವೀಕರಿಸಿದ ಡೋಸ್ ತುಂಬಾ ಕಡಿಮೆ. ಇಂತಹ ಸನ್ನಿವೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ತನ್ನ ಸರಕಾರಕ್ಕೆ ಸವಾಲು ಎಂದು ಹೇಳಿದ್ದಾರೆ.
ನಾವು ಈಗಾಗಲೇ 2.26 ಕೋಟಿ ಜನರಿಗೆ ಲಸಿಕೆಯ ಡೋಸ್ ನೀಡಿದ್ದೇವೆ. ಅಗತ್ಯ ಇರುವ ಡೋಸ್ ಗಳನ್ನು ಪೂರೈಸುವ ಕೇಂದ್ರ ಸರಕಾರದ ಭರವಸೆಯ ಹೊರತಾಗಿಯೂ ನಾವು ಕನಿಷ್ಠ 26 ಲಕ್ಷ ಡೋಸ್ ಗಳನ್ನು ಖರೀದಿಸಿದ್ದೇವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಲಸಿಕೀಕರಣದ ವೆಚ್ಚವನ್ನು ಭರಿಸಲು ಪಿಎಂ ಕೇರ್ಸ್ ನಿಧಿಯ ಹಣವನ್ನು ಯಾಕೆ ಬಳಸುತ್ತಿಲ್ಲ ಎಂಬುದನ್ನು ತಿಳಿಯಲು ಬಯಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೇ ತಪ್ಪಾದ ನೀತಿಯ ಕಾರಣದಿಂದ ಕೇಂದ್ರ ಸರಕಾರಕ್ಕೆ ಕೋವಿಡ್ ಬಿಕ್ಕಟ್ಟನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ಧಾರೆ.
ದೇಶದಲ್ಲಿ ಕೋವಿಡ್ ಅನ್ನು ನಿಯಂತ್ರಿಸಲು ನಮ್ಮ ನಾಚಿಕೆ ಇಲ್ಲದ ಪ್ರಧಾನಿ ವಿಫಲರಾಗಿದ್ದಾರೆ. ಆದರೆ, ಅವರ ಭಾವಚಿತ್ರ ಲಸಿಕೆಯ ಪ್ರಮಾಣ ಪತ್ರದಿಂದ ಹಿಡಿದು ಹೋರ್ಡಿಂಗ್ ವರೆಗೆ ಎಲ್ಲೆಲ್ಲೂ ರಾರಾಜಿಸುತ್ತಿದೆ. ನಾನು ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ, ಇಂತಹ ನಾಚಿಕೆ ಇಲ್ಲದ ಪ್ರಧಾನಿಯನ್ನು ನೋಡಿಲ್ಲ ಎಂದು ಟೀಕೆ ಮಾಡಿದ್ದಾರೆ.








