ಶಾದಿ ಡಾಟ್ ಕಾಂ ವೆಬ್ ಸೈಟ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಂದ ಮಹಿಳೆಯೊಬ್ಬರಿಗೆ 70 ಲಕ್ಷ ರೂ ವಂಚನೆ matrimonial website
ಬೆಂಗಳೂರು, ಡಿಸೆಂಬರ್28: ಮ್ಯಾಟ್ರಿ ಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಬೆಂಗಳೂರಿನ ಮಹಿಳೆಯೊಬ್ಬರಿಗೆ 70 ಲಕ್ಷ ರೂ ವಂಚನೆ ಮಾಡಿರುವ ಘಟನೆ ನಡೆದಿದೆ. matrimonial website
ವಿಚ್ಛೇದನ ಪಡೆದ ಮಹಿಳೆಯೊಬ್ಬರು ಮ್ಯಾಟ್ರಿ ಮೋನಿ ವೆಬ್ ಸೈಟ್ ಶಾದಿ ಡಾಟ್ ಕಾಂ ನಲ್ಲಿ ತಮ್ಮ ಪ್ರೊಫೈಲ್ ಅನ್ನು ಅಪ್ ಲೋಡ್ ಮಾಡಿದ್ದರು. ಕಾರ್ತಿಕ್ ಎಂಬಾತ ಶಾದಿ ಡಾಟ್ ಕಾಂ ಮೂಲಕ ಮಹಿಳೆಯ ಪರಿಚಯ ಮಾಡಿಕೊಂಡು, ತನಗೆ ವಿಚ್ಛೇದನ ಆಗಿರುವುದಾಗಿ ನಂಬಿಸಿ ಸ್ನೇಹವನ್ನು ಸಂಪಾದಿಸಿದ್ದಾನೆ.
ನಿಮ್ಮಲ್ಲಿ ಇದೆಯೇ ಈ ಒಂದು ರೂಪಾಯಿಯ ಹಳೆಯ ನೋಟು
ಇಬ್ಬರ ನಡುವಿನ ಸ್ನೇಹವು ಮುಂದುವರಿದು ಮದುವೆಯಾಗಲು ನಿರ್ಧರಿಸಿದ್ದಾರೆ. ಈ ನಡುವೆ ವ್ಯಕ್ತಿಯು ಮದುವೆಯಾದ ಬಳಿಕ ಇರಲು ಫ್ಲಾಟ್ ಅನ್ನು ಖರೀದಿಸಲು ಮಹಿಳೆ ಹಾಗೂ ಆಕೆಯ ಮನೆಯವರಿಂದ 70 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.
ಆಗಸ್ಟ್ ನಲ್ಲಿ ಮದುವೆಗೆ ದಿನಾಂಕ ನಿಗದಿಯಾಗಿದ್ದು, ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ ವರ ಮಹಾಶಯ ಮಹಿಳೆಯ ನಡತೆ ಸರಿಯಿಲ್ಲ ಎಂದು ಆರೋಪಿಸಲು ಪ್ರಾರಂಭಿಸಿದ್ದಾನೆ.
ಈ ನಡುವೆ ಮಹಿಳೆಯು ಕಾರ್ತಿಕ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಆತ ವಿಚ್ಛೇದನ ಪಡೆದಿಲ್ಲ ಎಂಬುವುದು ತಿಳಿದು ಬಂದಿದೆ. ಜೊತೆಗೆ ಶಾದಿ ಡಾಟ್ ಕಾಮ್ ಮೂಲಕ ಕಾರ್ತಿಕ್ ಹಲವಾರು ಮಹಿಳೆಯರಿಗೆ, ಯುವತಿಯರಿಗೆ ವಂಚಿಸಿರುವ ವಿಚಾರ ತಿಳಿದು ಬಂದಿದೆ.
ಇದೀಗ ಆತನ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶ್ವಾಸಕೋಶದ ಸೋಂಕಿನ ವಿರುದ್ಧ ಹೋರಾಡುವ ಮನೆಮದ್ದುಗಳು https://t.co/WnyybZvP4t
— Saaksha TV (@SaakshaTv) December 26, 2020
ಪಾಕಿಸ್ತಾನದ ನಿಜ ಬಣ್ಣ ಮತ್ತೊಮ್ಮೆ ಬಯಲು – ಭಾರತ ವಿರುದ್ಧ ಪಾಕ್ ವಿದೇಶಾಂಗ ಸಚಿವರ ಆಘಾತಕಾರಿ ಹೇಳಿಕೆhttps://t.co/pwHJMA5xeL
— Saaksha TV (@SaakshaTv) December 26, 2020