ಬೀದರ್: ಕಾರು ಪಲ್ಟಿಯಾದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಧರಿಹನುಮಾನ್ ಕ್ರಾಸ್ ಹತ್ತಿರ ನಡೆದಿದೆ. ಕಾರು ವೇಗವಾಗಿ ಚಲಿಸುತ್ತಿದ್ದರಿಂದಾಗಿ ಈ ಘಟನೆ ನಡೆದಿದೆ. ಕಾರು ವೇಗವಾಗಿ ತೆರಳಿ ಪಲ್ಟಿಯಾದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಶಿವಕುಮಾರ್ ಪೊಲೀಸ್ ಪಾಟೀಲ್(47) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮದವರು ಎನ್ನಲಾಗಿದೆ. ಇವರು ಸಂತಪೂರ್ ಕಡೆಯಿಂದ ಸ್ವ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.