ಚಿಕ್ಕಬಳ್ಳಾಪುರ: ಕೆಮಿಕಲ್ (Chemical) ದುರ್ವಾಸನೆಯಿಂದ ಉಸಿರುಗಟ್ಟಿ ಲಾರಿಯಿಂದ ಕೆಳಗೆ ಬಿದ್ದ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ (Chikkaballapur) ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಬಿಹಾರ ಮೂಲದ ಮಹಮದ್ ರಜೀಕ್ (33) ಸಾವನ್ನಪ್ಪಿರುವ ಕಾರ್ಮಿಕ. ಘಟನೆಯಲ್ಲಿ ವಿಕಾಸ್ ಹಾಗೂ ಸೋನು ಎಂಬ ಸಹ ಕಾರ್ಮಿಕರು (labours) ಉಸಿರಾಟದ ಸಮಸ್ಯೆಯಿಂದ (Breathing problem) ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.
ಮಹಮದ್ ರಜೀಕ್ ಮೂಲತಃ ಬಿಹಾರದವರು. ಕಳೆದ 5 ವರ್ಷಗಳ ಹಿಂದೆ ಹೆಂಡತಿಯೊಂದಿಗೆ ಕೂಲಿ ಕೆಲಸ ಹರಸಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ. ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲೀಕ ಶ್ರೀನಿವಾಸಮೂರ್ತಿ ಎಂಬುವವರಿಗೆ ಸೇರಿದ್ದ ರಾಮ್ ಕೀ ಕೆಮಿಕಲ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಇನ್ನಿಬ್ಬರುಕೆಲಸ ಮಾಡುತ್ತಿದ್ದುರ.
ಎಂದಿನಂತೆ ಬುಧವಾರ ಸಂಜೆ ಫ್ಯಾಕ್ಟರಿಗೆ ಕೆಮಿಕಲ್ ವೇಸ್ಟ್ ತುಂಬಿಕೊಂಡು ಹೋಗಲು ಟ್ಯಾಂಕರ್ ಲಾರಿ ಬಂದಿದೆ. ಈ ವೇಳೆ ಟ್ಯಾಂಕರ್‌ನ ಮೇಲ್ಭಾಗದ ಕ್ಯಾಪ್ ಒಪನ್ ಆಗಿದೆ. ಇದರಿಂದ ಕೆಮಿಕಲ್ ದುರ್ವಾಸನೆ ಹೊರಸೂಸಿದ್ದು, ಏಕಾಏಕಿ ಮೂವರಿಗೂ ಉಸಿರುಗಟ್ಟಿದಂತಾಗಿದೆ. ತಲೆ ಸುತ್ತು ಬಂದು ಲಾರಿಯಿಂದ ಕೆಳಗೆ ಬಿದ್ದಿದ್ದಾರೆ. ಆಗ ಮಹಮದ್ ರಜೀಕ್ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ವಿಕಾಸ್ ಹಾಗೂ ಸೋನು ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾರೆ.
ಮೃತನ ಸ್ವಗ್ರಾಮ ಬಿಹಾರಕ್ಕೆ ಕಳುಹಿಸಿಕೊಡಲು ತಯಾರಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.