ಕೊರೊನಾ ವೈರಸ್ ಬಗ್ಗೆ ಹಾಸ್ಯ ಮಾಡಿದವನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಮಾಸ್ಕೋದ ಮೆಟ್ರೋದಲ್ಲಿ ಕಜಕಿಸ್ತಾನ ಮೂಲದ ಕರೊಮಟುಲ್ಲೊ ಝಬೊರೊವ್ ಎಂಬಾತ ಜೋಕ್ಸ್ ಮಾಡಲು ಹೋಗಿ ಇದೀಗಾ ಪೊಲೀಸರ ಬಂಧನದಲ್ಲಿದ್ದಾನೆ.
ಕೊರೊನಾ ವೈರಸ್ 2020ರ ಮಹಾ ಮಹಾಮಾರಿಯಾಗಿದೆ. ಕೊರೊನಾ ವೈರಸ್ಗೆ ಇಡೀ ಚೀನಾನೇ ತತ್ತರಿಸಿ ಹೋಗಿದೆ. ಈ ನಡುವೆ ಕಜಕಿಸ್ತಾನದ ಝಬೊರೊವ್ ಎಬಾಂತ ತನ್ನ ಸ್ನೇಹಿತರೊಟ್ಟಿಗೆ ಸೇರಿ ಮೆಟ್ರೋ ರೈಲೊಂದರಲ್ಲಿ ಪ್ರಯಾಣಿಕರ ಬಳಿ ಬರುತ್ತಿದ್ದಂತೆ ಕೆಳಗೆ ಬೀಳುವಂತೆ ನಟಿಸುತ್ತಾನೆ. ಈತನ ಬಗ್ಗೆ ಆತನ ಗೆಳೆಯರನ್ನ ಕೇಳೀದರೆ ಆತನ ಸ್ನೇಹಿತರು ಪ್ರಯಾಣಿಕರಿಗೆ ಅವನಿಗೆ ಕೊರೊನಾ ವೈರಸ್ ಸೋಂಕು ಇದೆ ಎಂದು ಕೂಗಿ ಹೇಳುತ್ತಾರೆ.
ಇದರಿಂದ ಭಯಗೊಳ್ಳುವ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಈ ವಿಡಿಯೋವನ್ನು ಫೆಬ್ರವರಿ 2 ರಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದ.
ಮೊದಲೇ ಕೊರೊನಾ ವೈರಸ್ ಬಗ್ಗೆ ಇಡೀ ದೇಶವೇ ಬೆಚ್ಚಿ ಬಿದ್ದಿದ್ರೆ. ಈತ ಅದನ್ನ ತಮಾಷೆಯಾಗಿ ಬಿಂಬಿಸುತ್ತಿದ್ದನ್ನ ಅರಿತ ರಷ್ಯಾ ಪೊಲೀಸರು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದ ಮೇಲೆ ಆತನನ್ನ ಫೆಬ್ರವರಿ 8 ರಂದು ಬಂಧಿಸಿ, 5 ವರ್ಷ ಶಿಕ್ಷೆ ವಿಧಿಸಿ ಜೈಲಿಗಟ್ಟಿದ್ದಾರೆ.