Man killed Puppies : ನಾಯಿಮರಿಗಳನ್ನ ಕ್ರೂರವಾಗಿ ಕೊಂದು ವಿಡಿಯೋ Instagram ನಲ್ಲಿ ಪೋಸ್ಟ್ ಮಾಡಿದ ಪಾಪಿ..
ಕ್ರೂರಿಯೊಬ್ಬ ಮುಗ್ಧ ನಾಯಿಮರಿಗಳ ಕೊಂದಿದ್ದೂ ಅಲ್ದೇ ಅದರ ವಿಡಿಯೋ ಚಿತ್ರಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ..
2 ನಾಯಿಮರಿಗಳನ್ನ ಕೊಂದ ಈ ವ್ಯಕ್ತಿಯನ್ನ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ..
ಈ ನೀಚ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ, ಎರಡನೆಯದನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಬಳಿಕ ಅದು ಜೀವಂತವಾಗಿದೆಯೇ ಎಂಬುದನ್ನು ನೋಡಲು ಕಾಲಿನಿಂದ ಒದ್ದಿದ್ದಾನೆ. ಕೃತ್ಯದ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ..
ಈತನನ್ನ ಕಟ್ಟೇಡನ್ ಪ್ರದೇಶದ ನಿವಾಸಿ ರೇ ಎಂದು ಗುರುತಿಸಲಾಗಿದೆ.. ನವೆಂಬರ್ 15ರಂದು ವೀಡಿಯೋವನ್ನು ಆರೋಪಿ ಅಪ್ಲೋಡ್ ಮಾಡಿದ್ದಾನೆ. ಈತನ ವಿರುದ್ಧ ನೆಟ್ಟಿಗರು ಆಕ್ರೋಶವನ್ನ ಹೊರಹಾಕಿದ್ದಾರೆ.
ಕೃತ್ಯ ಬೆಳಕಿಗೆ ಬರುತ್ತಿದ್ದ ಹಾಗೆ ಮೈಲಾರ್ ದೇವಪಲ್ಲಿ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.








