ಮೇಕಪ್ ಇಲ್ದೇ ಹೆಂಡತಿ ಮುಖ ನೋಡಲಾಗ್ತಿಲ್ಲ : ಡಿವೋರ್ಸ್ ಕೋರಿದ ಪತಿ
ದುಬೈ: ದಾಂಪತ್ಯದಲ್ಲಿ ಯಾವುದ್ಯಾವುದೋ ಕಾರಣಕಕ್ಕೆಲ್ಲ ಬಿರುಕು ಮೂಡೋದು. ಪತಿ ಪತ್ನಿ ನಡುವೆ ನಗಳವಾಗಿ ಅನೇಕರು ಡಿವೋರ್ಸ್ ಪಡೆಯುತ್ತಾರೆ. ಆದ್ರೆ ದುಬೈನಲ್ಲೊಬ್ಬ ಪತಿ ತನ್ನ ಹೆಂಡತಿಯ ಮುಖವನ್ನ ಪ್ರತಿದಿನ ಮೇಕಪ್ ಇಲ್ಲದೇ ನೋಡೋಕಾಗ್ತಿಲ್ಲ ಅಂತ ಡಿವೋರ್ಸ್ ಕೋರಿದ್ದಾನೆ.
ಈತ ಈಜಿಪ್ಟಿಯನ್ ಆಗಿದ್ದಾನೆ.. 34 ವರ್ಷದ ವ್ಯಕ್ತಿ ತನ್ನ 28 ವರ್ಷದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿಚ್ಛೇದನ ನಿರ್ಧಾರದಿಂದ ಆಘಾತಗೊಂಡಿರುವ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಮದುವೆಗೂ ಮುನ್ನ ನನ್ನ ಪತ್ನಿ ತುಂಬಾ ಮೇಕಪ್ ಬಳಸುತ್ತಿದ್ದಳು. ಮೇಕಪ್ ರಹಿತವಾಗಿ ಆಕೆಯ ಮುಖವನ್ನು ನೋಡಲು ಬೇಸರವಾಗುತ್ತೆ. ಮೇಕಪ್ ಇಲ್ಲದೇ ಆಕೆ ಚೆನ್ನಾಗಿ ಕಾಣುವುದಿಲ್ಲ ಎಂದು ಪತಿ ದೂರಿದ್ದಾರೆ. ಅಲ್ಲದೇ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಈಕೆ ನನಗೆ ಫೇಸ್ಬುಕ್ನಲ್ಲಿ ಪರಿಚಯವಾದಳು. ಮೇಕಪ್ನಲ್ಲಿರುವ ಸುಂದರ ಫೋಟೊಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಇಬ್ಬರಿಗೂ ಪರಿಚಯವಾಯಿತು. ನಂತರ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದೆವು. ಇವಳುಅತಿಯಾಗಿ ಮೇಕಪ್ ಮಾಡಿಕೊಳ್ಳುವ ವಿಚಾರ ನನಗೆ ಗೊತ್ತಿರಲಿಲ್ಲ. ನಂತರ ಇಬ್ಬರೂ ವಿವಾಹವಾದೆವು. ಈಗ ಆಕೆಯನ್ನು ಮೇಕಪ್ ಇಲ್ಲದೇ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಅರ್ಜಿಯಲ್ಲಿ ಉಲ್ಲೇಖಿಸಿರೋದಾಗಿ ವರದಿಯಾಗಿದೆ.








