ಋತುಸ್ರಾವವಾಗಿರುವುದನ್ನು ಮುಚ್ಚಿಟ್ಟು ಮದುವೆ – ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತಿ periods on wedding
ವಡೋದರಾ, ಡಿಸೆಂಬರ್25: ಗುಜರಾತ್‌ನ ವಡೋದರಾದ ವ್ಯಕ್ತಿಯೊಬ್ಬ ತನ್ನ ಮದುವೆಯ ದಿನದಂದು ಪತ್ನಿ ಋತುಸ್ರಾವವಾಗಿರುವುದನ್ನು ಮುಚ್ಚಿಟ್ಟ ಕಾರಣ ವಿಚ್ಛೇದನ ಕೋರಿರುವ ಆಘಾತಕಾರಿ ಘಟನೆ ನಡೆದಿದೆ. periods on wedding

ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿ, ಮದುವೆಯ ಸಮಯದಲ್ಲಿ ಆಕೆ ಮುಟ್ಟಾಗಿದ್ದಳು ಎಂದು ತಿಳಿದು ತಾನು ಮತ್ತು ತನ್ನ ತಾಯಿ ಆಘಾತಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾನೆ.
ಮದುವೆ ಸಮಾರಂಭ ಪೂರ್ಣಗೊಂಡ ನಂತರ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಕೆಲವೇ ಕ್ಷಣಗಳ ಮೊದಲು ತನ್ನ ಪತ್ನಿ ತಾನು ಮುಟ್ಟಾಗಿರುವ ಬಗ್ಗೆ ಹೇಳಿದ್ದಾಗಿ ಹೇಳಿಕೊಂಡ ಆ ವ್ಯಕ್ತಿ, ಈ ವಿಷಯದ ಬಗ್ಗೆ ತನ್ನ ಕುಟುಂಬದ ನಂಬಿಕೆಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾನೆ.
ಆ ವ್ಯಕ್ತಿಯು ತನ್ನ ಹೆಂಡತಿ ಹಣ ಮತ್ತು ಐಷಾರಾಮಿ ವಸ್ತುಗಳ ಬೇಡಿಕೆ ಇಟ್ಟಿದ್ದು, ಆಕೆಯ ಆಸೆಗಳನ್ನು ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಸಹ ಆರೋಪಿಸಿದ್ದಾನೆ. 2020 ರ ಜನವರಿ ಕೊನೆಯ ವಾರದಲ್ಲಿ ಅವರು ವಿವಾಹವಾಗಿದ್ದರು . ಆ ವ್ಯಕ್ತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಆತನ ಪತ್ನಿ ಶಿಕ್ಷಕಿಯಾಗಿದ್ದಾರೆ.
ಮುಂಬೈ ಸುನ್ನಿ ಮುಸ್ಲಿಂ ಉಲೆಮಾಗಳ ಸಭೆಯಲ್ಲಿ ಹಂದಿ ಜೆಲಾಟಿನ್ ಹೊಂದಿರುವ ಚೀನೀ ಲಸಿಕೆಗೆ ನಿಷೇಧ
ವರದಿಯ ಪ್ರಕಾರ, ಅವರ ಮದುವೆಯ ನಂತರ, ಆತನ ಪತ್ನಿಯು ಆತನ ಹಿರಿಯ ಸಹೋದರ ಮನೆಯ ಖರ್ಚು ನೋಡಿಕೊಳ್ಳುತ್ತಿರುವುದರಿಂದ ನೀವು ಮನೆಯ ಮಾಸಿಕ ಖರ್ಚು ಕೊಡಬೇಡಿ ಎಂದು ಒತ್ತಡ ಹೇರಿದ್ದಳು.
ಬದಲಾಗಿ, ಪ್ರತಿ ತಿಂಗಳು 5,000 ರೂ ನೀಡಿ ತಮ್ಮ ಮನೆಯಲ್ಲಿ ಹವಾನಿಯಂತ್ರಣವನ್ನು ಅಳವಡಿಸಲು ಒತ್ತಾಯಿಸಿದಳು. ಆತ ಎಸಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅವಳು ಅವನೊಂದಿಗೆ ಜಗಳ ಮಾಡಿ ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ಹೋದಳು. ನಂತರ ಅವಳನ್ನು ಮನವೊಲಿಸಿ ಮರಳಿ ಕರೆತಂದ ನಂತರವೂ ಅವಳು ತನ್ನ ಹೆತ್ತವರ ಮನೆಗೆ ಹೋಗುತ್ತಿದ್ದಳು ಮತ್ತು ದಿನಗಳವರೆಗೆ ಹಿಂತಿರುಗುತ್ತಿರಲಿಲ್ಲ ಎಂದು ಅರ್ಜಿದಾರ ಹೇಳಿಕೊಂಡಿದ್ದಾನೆ.

ಬಾಪೋಡ್ ಪೊಲೀಸ್ ಠಾಣೆಯಲ್ಲಿ ಪತ್ನಿ ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಸುಳ್ಳು ದೂರುಗಳನ್ನು ನೀಡಿದ ನಂತರ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಒತ್ತಾಯಿಸಲಾಯಿತು ಎಂದು ಆತ ಹೇಳಿದ್ದಾನೆ. ಅರ್ಜಿಯನ್ನು ಕುಟುಂಬ ನ್ಯಾಯಾಲಯದಲ್ಲಿ ನೋಂದಾಯಿಸಲಾಗಿದೆ ಮತ್ತು ನ್ಯಾಯಾಲಯವು ಅದನ್ನು ವಿಚಾರಣೆಗೆ ತೆಗೆದುಕೊಳ್ಳುತ್ತದೆ ಎಂದು ಅವರ ವಕೀಲರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1341404758230351873?s=19
https://twitter.com/SaakshaTv/status/1341406814479507461?s=19








