ಏಕಕಾಲಕ್ಕೆ ಕೋವಿಡ್, ಮಂಕಿಪಾಕ್ಸ್, HIV ವೈರಸ್ ಗೆ ತುತ್ತಾದ ವ್ಯಕ್ತಿ…
ಇಟಲಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬ ಏಕಕಾಲಕ್ಕೆ ಕೋವಿಡ್ -19, ಮಂಕಿಪಾಕ್ಸ್, ಮತ್ತು HIV ರೋಗಕ್ಕೆ ತುತ್ತಾಗಿದ್ದಾನೆ. ಮೂರು ರೀತಿಯ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟೀವ್ ಎಂದು ವರದಿಯಾಗಿದೆ.
ಈ ವ್ಯಕ್ತಿ ಇತ್ತೀಚಿಗೆ ಸ್ಪೇನ್ ನಿಂದ ಹಿಂತಿರುಗಿದ್ದ . ಐದು ದಿನಗಳ ಕಾಲ ಪ್ರವಾಸ ಮುಗಿಸಿ ಬಂದ ತರುವಾಯ 9 ದಿನಗಳ ನಂತರ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ಜರ್ನಲ್ ಆಫ್ ಇನ್ಫೆಕ್ಷನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವ್ಯಕ್ತಿಗೆ “ಜ್ವರ, ಗಂಟಲು ನೋವು, ಆಯಾಸ ಮತ್ತು ತಲೆನೋವು” ಕಾಣಿಸಿಕೊಂಡಿದೆ. ಈ ಲಕ್ಷಣಗಳು ಕಂಡು ಬಂದ 3 ದಿನಗಳ ನಂತರ ವ್ಯಕ್ತಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ತದನಂತರ ರೋಗಿಯ ಎಡಗೈ ಮೇಲೆ ದದ್ದುಗಳು ಕಂಡು ಬಂದಿವೆ. ನಂತರ ಕೈ ಕಾಲು ದೇಹ ಮುಖದ ಹಲವು ಭಾಗಗಳಲ್ಲಿ ದದ್ದುಗಳು ಕಾಣಿಸಿಕೊಂಡಿವೆ. ರೋಗಿಯನ್ನು ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ಯೂನಿವರ್ಸಿಟಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಅಲ್ಲಿ ಆತನಿಗೆ ಎಚ್ಐವಿ ಮತ್ತು ಮಂಕಿಪಾಕ್ಸ್ಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಮಂಕಿಪಾಕ್ಸ್ ಮತ್ತು ಕೋವಿಡ್ನಿಂದ ಚೇತರಿಸಿಕೊಂಡ ನಂತರ ವ್ಯಕ್ತಿಯನ್ನು ನಂತರ ಬಿಡುಗಡೆ ಮಾಡಲಾಗಿದೆ.