ಕೋಲಾರ : ಇಬ್ಬರನ್ನು ಮದ್ವೆಯಾಗಿ ಸುದ್ದಿಯಾಗಿದ್ದ ಯುವಕ ಜೈಲು ಪಾಲು
ಕೋಲಾರದಲ್ಲಿ ಇಬ್ಬರು ಹುಡುಗಿಯನ್ನು ಮದುವೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದ ಯುವಕ ಇದೀಗ ಜೈಲು ಪಾಲಾಗಿದ್ದಾನೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವೇಗಮಡಗು ಗ್ರಾಮದ ಉಮಾಪತಿ ಕೆಲ ದಿನಗಳ ಹಿಂದೆ ಅಕ್ಕ – ತಂಗಿಯನ್ನು ಒಂದೇ ಮಂಟಪದಲ್ಲಿ ವರಿಸಿದ್ದನು.
ಇದರಲ್ಲಿ ಲಲಿತ (ತಂಗಿ) ಅಪ್ರಾಪ್ತೆ ಅನ್ನೋ ಕಾರಣಕ್ಕೆ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕ ಇಬ್ಬರನ್ನು ಮದುವೆಯಾಗಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಫೋಟೋ ವೈರಲ್ ಆದ ಹಿನ್ನೆಲೆ, ಮದುವೆ ಕುರಿತು ಪರಿಶೀಲನೆ ಮಾಡುವಂತೆ ಡಿಸಿ ಆರ್.ಸೆಲ್ವಮಣಿ ಆದೇಶಿಸಿದ್ದರು.
ತನಿಖೆ ವೇಳೆ ಲಲಿತ ಅಪ್ರಾಪ್ತೆ ಅನ್ನೋದು ಬಯಲಾಗಿದೆ. ಈ ಹಿನ್ನೆಲೆ ವರ ಉಮಾಪತಿ, ಫೋಷಕರು, ಅರ್ಚಕ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.