ಕೊರೊನಾ ಲಸಿಕೆ ಪಡೆದ ನಂತರ ನಡೆಯಲು, ಮಾತನಾಡಲು ಪ್ರಾರಂಭಿಸಿದ ವ್ಯಕ್ತಿ
ಜಾರ್ಖಂಡ: ಕೊರೊನಾ ನಿಯಂತ್ರಿಸಲು ಕೇಂದ್ರ ಸರಕಾರ ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಕೊರೊನಾ ಲಸಿಕೆ ಕೋವಿಶಿಲ್ಡ್ ಪಡೆದ 55 ವರ್ಷದ ಮುಂಡಾ ಅನ್ನೊ ವ್ಯಕ್ತಿ ನಡೆಯಲು ಮತ್ತು ಮಾತನಾಡಲು ಪ್ರಾರಂಭಿಸಿದ್ದು ಅಚ್ಚರಿ ಮೂಡಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ಚಮತ್ಕಾರವು ಜಾರ್ಖಾಂಡನ ಬೊಕಾರೊ ಜಿಲ್ಲೆಯ ಪೀಟರ್ವಾರ್ ಬ್ಲಾಕ್ನ ಉತ್ತರಾಸರ ಪಂಚಾಯತ್ ನ ವ್ಯಾಪ್ತಿಯಲ್ಲಿ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜನವರಿ 4 ರಂದು ಮುಂಡಾ ಅವರಿಗೆ ಅವರ ಮನೆಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿದ್ದರು. ಹಾಕಿದ ಕೆಲವು ಕ್ಷಣದ ನಂತರ ವ್ಯಕ್ತಿ ನಡೆಯಲು ಮತ್ತು ಮಾತನಾಡಲು ಪ್ರಾರಂಭಿಸಿದ್ದಾನೆ.
ಈ ವ್ಯಕ್ತಿ ಐದು ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದ. ಸದ್ಯ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನ್ನು ಪಡೆದ 55 ವರ್ಷದ ಮುಂಡಾ ನಡೆಯಲು ಮತ್ತು ಮಾತನಾಡಿರುವ “ಅದ್ಭುತ ಚೇತರಿಕೆ” ಯಿಂದ ದಿಗ್ಭ್ರಮೆಗೊಂಡ ವೈದ್ಯರು, ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ವಿಷಯದ ಕುರಿತು ತನಿಖೆ ಮಾಡಲು ಮೂರು ಸದಸ್ಯರ ವೈದ್ಯಕೀಯ ತಂಡವನ್ನು ಸರಕಾರ ರಚಿಸಿದೆ.