ಭಾರತದ ಸ್ಪರ್ಧಿಗೆ ಕೊರೊನಾ: Miss World 2021 ಫೈನಲ್ ಮುಂದೂಡಿಕೆ
ನವದೆಹಲಿ : ವಿಶ್ವಾದ್ಯಂತ ಮತ್ತೆ ಕೊರೊನಾ ಆತಂಕ ತಲೆದೂರಿರುವ ನಡುವೆಯೇ Miss World 2021 ಫೈನಲ್ ಮುಂದೂಡಿಕೆಯಾಗಿದೆ.. ಇದಕ್ಕೆ ಪ್ರಮುಖ ಕಾರಣ ಭಾರತದ ಸ್ಪರ್ಧಿಯೂ (@manasavaranasi) ಸೇರಿದಂತೆ ಒಟ್ಟು 17 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾದ ಬೆನ್ನಲ್ಲೇ ಫೈನಲ್ಸ್ ಮುಂದೂಡಲಾಗಿದೆ..
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಾನಸಾ ವಾರಣಾಸಿ ಅವರಿಗೂ ಕೊರೊನಾ ಸೋಂಕು ತಗುಲಿರುವುದನ್ನು ಮಿಸ್ ಇಂಡಿಯಾ ಸಂಸ್ಥೆ ಖಚಿತಪಡಿಸಿದೆ.
ಗುರುವಾರ ವಿಶ್ವ ಸುಂದರಿ ಸ್ಪರ್ಧೆ ನಡೆಯಬೇಕಿತ್ತು. ಆದರೆ 17 ಸ್ಪರ್ಧಿಗಳು ಮತ್ತು ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸೋಂಕಿತ ಸ್ಪರ್ಧಿಗಳು ಸದ್ಯ ಪೋರ್ಟೊ ರಿಕೊದಲ್ಲಿ ಐಸೊಲೇಷನ್ ಆಗಿದ್ದಾರೆ.
https://www.instagram.com/p/CXjQxswpB1J/?utm_source=ig_web_copy_link
ಮಿಸ್ ವರ್ಲ್ಡ್ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ 90 ದಿನಗಳ ಒಳಗಾಗಿ ಸ್ಪರ್ಧೆಯನ್ನು ಪೋರ್ಟೊ ರಿಕೊದಲ್ಲೇ ಮರು ನಿಗದಿಪಡಿಸಲಾಗುವುದು ಎಂದು ಮಿಸ್ ವರ್ಲ್ಡ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವ ಸುಂದರಿ ಫೈನಲ್ ಸ್ಪರ್ಧೆಯನ್ನು ಮುಂದೂಡಲಾಗಿರುವ ಬಗ್ಗೆ ಅಧಿಕೃತವಾಗಿ @MissWorld, ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತ ಪ್ರಕಟನೆ ಹೊರಡಿಸಿ ಮಾಹಿತಿ ನೀಡಿದೆ.
https://www.instagram.com/p/CXjQxswpB1J/?utm_source=ig_web_copy_link