Mandos Effect : ಮಳೆಯಿಂದಾಗಿ ಒಣ ಮೆಣಸಿನಕಾಯಿ ಬೆಳೆ ಹಾಳು…
ಮಾಂಡೋಸ್ ಚಂಡಮಾರುತ ಎಫೆಕ್ಟ್ ನಿಂದ ರಾಜ್ಯದ ಹಲವೆಡೆ ನಿತ್ಯ ಜಿಟಿ ಜಿಟಿ ಮಳೆ ಸುರಿಯುತ್ತಿದೆ ಇದರ ಪರಿಣಾಮ ಹಿಂಗಾರಿನಲ್ಲಿ ಬೆಳೆದಿದ್ದ ಮತ್ತು ಹಲವು ತರಕಾರಿ ಬೆಳೆಗಳಿಗೆ ಹಾನಿಯಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲೂ ಸಂಪೂರ್ಣವಾಗಿ ಜಿಟಿಜಿಟಿ ಮಳೆ ಸುರಿಯಿತ್ತಿದ್ದದೆ. ಥಂಡಿಯ ವಾತಾವರಣಕ್ಕೆ ಕಟಾವಿಗೆ ಬಂದಿದ್ದ ಮೆಣಸಿನಕಾಯಿ ಬೆಳೆ ಹಾಳಾಗುತ್ತಿದೆ. ಕಟಾವು ಮಾಡಿ ಒಣಗಿಸಿಹಾಕಿದ್ದ ಮೆಣಸಿನಕಾಯಿ ಗುಡ್ಡೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಮಳೆಯಿಂದಾಗಿ ಮೆಣಸಿನಕಾಯಿ ಕೊಳೆಯುತ್ತಿದೆ.
ಒಣಮೆಣಸಿನಕಾಯಿ ಹಾಳಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಎದುರಾಗಿದೆ. ಕೊಪ್ಪಳ ತಾಲೂಕಿನ ಬಿನ್ನಾಳ, ಯರೇಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಮೆಣಸಿನಕಾಯಿಗೆ ಪರಿಹಾರ ನೀಡಲೂ ರೈತರು ಆಗ್ರಹಿಸಿದ್ದಾರೆ.
Mandos Effect: Chilli Crop Damaged Due to Rain…








