Mandya : 58 ವರ್ಷದ ಗುಡ್ಡಪ್ಪ ನೇಮಕ ವಿವಾದ ಇತ್ಯಾರ್ಥ : ಬಸಪ್ಪನ ಪವಾಡ
ಮಂಡ್ಯ : ಬಸಪ್ಪನ ಮತ್ತೊಂದು ಪವಾಡಕ್ಕೆ ಸಕ್ಕರೆ ನಾಡು ಮಂಡ್ಯ ಜನ ಸಾಕ್ಷಿಯಾಗಿದ್ದಾರೆ. 58 ವರ್ಷದ ಗುಡ್ಡಪ್ಪ ನೇಮಕ ವಿವಾದ ಇತ್ಯಾರ್ಥವಾಗಿದೆ.. ಬಸಪ್ಪನ ತೀರ್ಪಿಗೆ ಮಂಡ್ಯದ ದೊಡ್ಡಬಾಣಸವಾಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕದ ನಿರ್ಧಾರವಾಗಿದೆ. ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರ ಆಯ್ಕೆಯಾಗಿದೆ.
ಹೊನ್ನನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸಪ್ಪನ ಪವಾಡ ದಿಂದ 58 ವರ್ಷದಿಂದ ನಿಂತಿದ್ದ ಹಬ್ಬ ಆಚರಣೆಗೆ ಬಸಪ್ಪನ ತೀರ್ಪು ಮುನ್ನುಡಿ ಬರೆದಿದೆ. ಮಟ್ಟಲದಮ್ಮ ದೇವಿಯ ಅರ್ಚಕರಿಬ್ಬರು ನಿಧನದ ಬಳಿಕ , ಪೂಜಾರಿ ಆಯ್ಕೆ ವಿವಾದದಿಂದ ಪಟ್ಟಲದಮ್ಮನ ಕೊಂಡ, ಬಡ್ಡಿ ಹಬ್ಬ ನಿಂತಿತ್ತು.
58 ವರ್ಷದ ವಯೋಸಹಜವಾಗಿ ಅರ್ಚಕರು ಮೃತಪಟ್ಟಿದ್ದ ನಂತರ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ರು. ಮತ್ತೆ ಹಬ್ಬ ಆಚರಣೆ ಮಾಡಬೇಕೆಂದು ಗ್ರಾಮಸ್ಥರು ದೈವಸ್ವರೂಪಿ ಮಂಟೆಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು. ಅವರ ಮನವಿ ಮೇರೆಗೆ ಬಸಪ್ಪ ಊರಿಗೆ ಬಂದಿತ್ತು. ಈ ವೇಳೆ ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಬಸಪ್ಪ ಗುರುತಿಸಿದೆ.
ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದೆ. ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನ ಅರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.








