Mandya | ಮನೆ ಗೋಡೆ ಕುಸಿದು ಅಜ್ಜಿ ಸಾವು
ಮಂಡ್ಯ : ಮನೆ ಗೋಡೆ ಕುಸಿದು ಅಜ್ಜಿ ಮೃತಪಟ್ಟಿರುವ ಘಟನೆ ಮಂಡ್ಯದ ಸಾಹುಕಾರ್ ಚನ್ನಯ್ಯ ಬಡಾವಣೆಯಲ್ಲಿ ನಡೆದಿದೆ.
65 ವರ್ಷದ ಪಾರ್ವತಿ ಬಾಯಿ ಮೃತ ದುರ್ದೈವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ.
ಪರಿಣಾಮ ಜಿಲ್ಲೆಯಾದ್ಯಂತ ನಾನಾ ಅವಾಂತರಗಳು ಸೃಷ್ಠಿಯಾಗಿವೆ.

ಅದರಂತೆ ಚನ್ನಯ್ಯ ಬಡಾವಣೆಯಲ್ಲಿ ವಾಸವಿದ್ದ ಪಾರ್ವತಿ ಬಾಯಿ ಅವರ ಮನೆ ಕೂಡ ಕುಸಿತವಾಗಿದೆ.
ಸತತ ಮಳೆಗೆ ಇಂದು ಬೆಳಿಗ್ಗೆ ಮಳೆ ಕುಸಿದಿದೆ.
ಪರಿಣಾಮ ಮನೆಯಲ್ಲಿ ಮಲಗಿದ್ದ ವೃದ್ಧೆ ಗೋಡೆಯ ಅವಶೇಷಗಳ ಕೆಳಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








