Hijab Controvercy : ‘ಅಲ್ಲಾಹು ಅಕ್ಬರ್ ಘೋಷಣೆ’ ಘೋಷಣೆ ಬಗ್ಗೆ ವಿದ್ಯಾರ್ಥಿನಿ ಮಾತು…
ಮಂಡ್ಯ: ಹಿಜಬ್ – ಕೇಸರಿ ಸಂಘರ್ಷ ರಾಜ್ಯದಲ್ಲಿ ತಾರಕಕ್ಕೇರಿದೆ.. ಈ ನಡುವೆ ಮಂಡ್ಯದ ಕಾಲೇಜಿನಲ್ಲಿ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಹುಡುಗರ ಮುಂದೆ ಒಬ್ಬಳೇ ನಿಂತು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು , ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.. ಅಲ್ಲದೇ ಅನೇಕರು ಈಕೆಯನ್ನ ವೀರ ವನಿತೆಯಂತೆ ಬೆಂಬಿಸುತ್ತಿದ್ದಾರೆ.. ಇನ್ನೂ ಅನೇಕರು ಶಾಬ್ಭಾಶ್ ಗಿರಿ ಕೊಟ್ಟು ಹುರಿದುಂಬಿಸುವ ಕೆಲಸ ಮಾಡ್ತಿದ್ದಾರೆ..
ಇದೀಗ ಇದಕ್ಕೆ ಖುದ್ದು ಮುಸ್ಕಾನ್ ಸ್ಪಷ್ಟನೆ ನೀಡಿದ್ದು , ಬುರ್ಕಾ ತೆಗೆದು ಹೋಗು ಅಂತ ಹುಡುಗರು ಹೇಳಿದ್ರು. ಗುಂಪು ಕಟ್ಟಿಕೊಂಡು ಘೋಷಣೆ ಕೂಗಿದ್ರು. ನಾನು ಅಸೈನ್ಮೆಂಟ್ ಕೊಡಲು ಕಾಲೇಜಿಗೆ ಹೋಗಿದ್ದು. ಇದೇ ರೀತಿ ನನ್ನ ಸ್ನೇಹಿತೆಯರಿಗು ತಡೆದಿದ್ರು. ಅವರು ಜೈ ಶ್ರೀರಾಮ್ ಅಂತ ಘೋಷಣೆ ಕೂಗಿದ್ರಿಂದ ನಾನು ಅಲ್ಲಾಹು ಅಕ್ಬರ್ ಅಂತ ಕೂಗಿದೆ.
ಅವರು ಕೂಗಿದ್ದುತಪ್ಪಿಲ್ಲ, ನಾನು ಕೂಗಿದ್ದು ತಪ್ಪಿಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದ್ರು. ಆ ಕ್ಷಣದಲ್ಲಿ ನನಗೆ ಯಾವ ಭಯನು ಇಲ್ಲ. ಭಯ ಏಕೆ ಪಡಬೇಕು. ಕೋರ್ಟ್ ಆದೇಶ ಏನು ಬರುತ್ತೆ ಅದನ್ನ ಪಾಲನೆ ಮಾಡ್ತೇವೆ ಎಂದು ಮಾಧ್ಯಗಲಿಗೆ ಹೇಳಿಕೆ ನೀಡಿದ್ದಾಳೆ..
Hijab Controvercy : ಉಪನ್ಯಾಸಕಿಗೆ ಬುಲ್ ಶಿಟ್ ಎಂದು ಅವಮಾನಿಸಿದ ಹಿಜಬ್ ಧಾರಿ ವಿದ್ಯಾರ್ಥಿನಿ
ಅಲ್ಲದೇ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಯುವತಿಗೆ 5 ಲಕ್ಷ ಬಹುಮಾನ ಎಂದು FB ಪೋಸ್ಟ್ ವಿಚಾರವಾಗಿಯೂ ಮಾತನಾಡಿರೋ ವಿದ್ಯಾರ್ಥಿನಿ ಈ ವಿಚಾರ ನನಗೆ ಗೊತ್ತಿಲ್ಲ. ಯಾರೋ ಸುಮ್ಮನೆ ಈ ರೀತಿ ಹಬ್ಬಿಸಿದ್ದಾರೆ ಎಂದು ಸ್ಪಷನೆ ನಿಡಿದ್ದಾಳೆ..









