Mandya | ರಾಜಣ್ಣ ಒಬ್ಬ ಸೂ.. ಮಗ : ನಾಲಿಗೆ ಹರಿಬಿಟ್ಟ ಜೆಡಿಎಸ್ ಮುಖಂಡ
ಮಂಡ್ಯ: ಮಾಜಿ ಶಾಸಕ ಕೆ.ಎನ್.ರಾಜಣ್ಣ ಟೀಕಿಸುವ ಬರದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ಮುಖಂಡ ತಿಮ್ಮೇಗೌಡ ನಾಲಿಗೆ ಹರಿಬಿಟ್ಟಿದ್ದಾರೆ.
ಹೆಚ್ ಡಿ ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದಾರೆ.
ಇನ್ನು ನಾಲ್ವರ ಮೇಲೆ ಹೋಗುವ ಸಮಯ ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ ಲೇವಡಿ ಮಾಡಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಂಡ್ಯ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ರಾಜಣ್ಣ ಒಬ್ಬ ಸೂ.. ಮಗ.
ತುಮಕೂರಿನಲ್ಲಿ ಏನೇನು ಮಾಡಿ ಎಷ್ಟು ಮನೆ ಹಾಳು ಮಾಡಿದ್ದೀಯಾ. ಎಷ್ಟು ಜನರನ್ನ ರೇಪ್ ಮಾಡಿದ್ಯಾ ಅಂತ ಗೊತ್ತಿದೆ..!
1987 ರಿಂದ 91ರ ವರಗೆ ನಿಮ್ಮ ಯೋಗ್ಯತೆ ನೋಡಿದ್ದೇನೆ. ದೇವೇಗೌಡ್ರು ಬಗ್ಗೆ ಮಾತನಾಡುವುದಕ್ಕೆ ನನಗೆ ಯೋಗ್ಯತೆ ಇಲ್ಲ.
ದೇವೇಗೌಡರು ಈ ದೇಶದ ಜನರ ಸ್ವತ್ತು. ನೀನು ನಾಯಿತರ ಮಾತನಾಡಿದ್ಯಾ. ಲಕ್ಷಾಂತರ ಜನರು ದೇವೇಗೌಡ್ರ ಪರ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.