ಮಂಡ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆಯು ಅಲರ್ಟ್ ಆಗಿದೆ..
ರಾತ್ರೋ ರಾತ್ರಿ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.. ಮಂಡ್ಯ ಎಸ್‌ಪಿ ಯತೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಮಂಡ್ಯ ನಗರದ 20ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಪರಿಶೀಲನೆ ನಡೆದಿದೆ. ಅಶೋಕ್@ಪೈ, ಶಿವು@ಡೇಂಜರ್ ಶಿವ ಸೇರಿದಂತೆ ಹಲವು ರೌಡಿಶೀಟರ್ ಮನೆಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ ಪೊಲೀಸರು..
ನಡು ರಸ್ತೆಯಲ್ಲಿ ನಿಲ್ಲಿಸಿ ರೌಡಿಗಳಿಗೆ ಎಸ್‌ಪಿ ಯತೀಶ್ ಬೆಂಡೆತ್ತಿದ್ದಾರೆ..
ಕೋಟಿ ಕೋಟಿ ಬೆಲೆಬಾಳುವ ಮನೆಗಳನ್ನ ಹೊಂದಿರುವ ರೌಡಿಶೀಟರ್‌ಗಳ ಮನೆಗಳನ್ನ ಕಂಡು ಎಸ್‌ಪಿ. ಆಶ್ಚರ್ಯಗೊಂಡಿದ್ದಾರೆ.. ರೌಡಿಗಳ ವೃತ್ತಿ, ಆದಾಯದ ಮೂಲ, ಸಂಪಾದನೆ ಪ್ರಶ್ನಿಸಿದ್ದಾರೆ..
ದುಡಿಮೆಯಿಲ್ಲದಿದ್ರು ದೊಡ್ಡ ಮನೆ, ಜಮೀನು ಸಂಪಾದನೆ ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ..
ಎಸ್‌ಪಿ ಯತೀಶ್ ಪ್ರಶ್ನೆಗೆ ರೌಡಿಶೀಟರ್‌ಗಳು ತಬ್ಬಿಬ್ಬಾಗಿದ್ದಾರೆ. ಡೇಂಜರ್ ಶಿವನ ಫಾರ್ಚುನರ್ ಕಾರು ಕೂಡ ಪೊಲೀಸರು ಪರಿಶೀಲಿಸಿದ್ದಾರೆ. ಏನಾದರೂ ಇಟ್ಟಿದ್ದರೇ ಹೇಳು ಎಂದು ಪೊಲೀಸರು ಕೇಳಿದಾಗ ರೌಡಿಸಂನಿಂದ ರಿಟೈರ್ಡ್ ಆಗಿದ್ದೀನಿ ಎಂದು ಡೇಂಜರ್ ಶಿವ ಉತ್ತರಿಸಿದ್ದಾನೆ..








