Mandya: ಭೀಕರ ರಸ್ತೆ ಅಪಘಾತ, ಕಾಂಪೌಂಡ್ ಏರಿದ ಕಾರು…
ಮಂಡ್ಯದಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಅಫಘಾತದ ರಭಸಕ್ಕೆ ಕಾರು ದೇವಸ್ಥಾನದ ಕೌಂಪೌಂಡ್ ಏರಿ ಕುಳಿತಿದೆ.
ಮಂಡ್ಯ ನಗರದ ಕಲ್ಲಹಳ್ಳಿ ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಯ ದೇವಸ್ಥಾನದ ಬಳಿ ಅಫಘಾತ ಸಂಭವಿಸಿದೆ. ಸಿದ್ದಯ್ಯನಕೊಪ್ಪಲು ಗ್ರಾಮದ ಸತೀಶ್ (40) ಮೃತ ದುರ್ದೈವಿ.
ತೆಂಗಿನ ಕಾಯಿ ವ್ಯಾಪಾರ ಮುಗಿಸಿಕೊಂಡು ತೆರಳುವ ವೇಳೆ ಘಟನೆ ನಡೆದಿದ್ದು, ಬಿಸಿಲುಮಾರಮ್ಮ ದೇಗುಲದ ಕಾಂಪೌಡ್ ಗೆ ಡಿಕ್ಕಿಯಾಗಿ ಕಾರು ನಿಂತಿದೆ. ಕಾರು ಕಾಂಪೌಂಡ್ ಹಾರಿ ನಿಂತಿದ್ದರಿಂದ ಭಾರೀ ಅನಾಹುತ ತಪ್ಪಿದ್ದು ಕಾರಿನಲ್ಲಿದ್ದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಕಾರಿನ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Mandya: Terrible road accident, car climbs compound…