Mandya | ಮಕ್ಕಳ ಆಹಾರದಲ್ಲಿ ಹುಳ : ಮುಖ್ಯ ಶಿಕ್ಷಕ ಅಮಾನತು
ಮಂಡ್ಯ : ಶಾಲಾ ಮಕ್ಕಳಿಗೆ ಹುಳುಗಳಿರುವ ಆಹಾರ ವಿತರಣೆ ಪ್ರಕರಣದಲ್ಲಿ ಮಂಡ್ಯದ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯ ಶಿಕ್ಷಕ ಸೇರಿ ನಾಲ್ವರು ಅಡುಗೆ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಮುಖ್ಯಶಿಕ್ಷಕ ಗಿರೀಶ್ ಅವರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಜವರೇಗೌಡ ಆದೇಶ ಹೊರಡಿಸಿದ್ದಾರೆ.
ನಾಗರತ್ನ, ಮಂಗಳಮ್ಮ, ಭಾಗ್ಯಮ್ಮ, ಗಂಗಮ್ಮ ಅಮಾನತುಗೊಂಡು ಅಡುಗೆ ಸಿಬ್ಬಂದಿಗಳು.

ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಸ್ಥಗಿತಗೊಂಡಿದೆ.
ಈ ಶಾಲೆಯಲ್ಲಿ LKG ಯಿಂದ 8ನೇ ತರಗತಿಯ ಸುಮಾರು 500 ಮಕ್ಕಳಿದ್ದು, ಬಿಸಿಯೂಟ ಸ್ಥಗಿತವಾಗಿರುವುದರಿಂದ ಮಕ್ಕಳು ಮನೆಯಿಂದಲೇ ಊಟ ತಂದು ಶಾಲೆಯಲ್ಲಿ ಸೇವಿಸುತ್ತಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಶಿಕ್ಷಕ, ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಅಧಿಕಾರಿಗಳು, ಊಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ.
ಇದರಿಂದ ಮಕ್ಕಳು ಮನೆಯಿಂದ ಊಟ ತರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.








