ADVERTISEMENT
Thursday, February 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದಶಕವಾದರೂ ಮರೆಯದ ಮಂಗಳೂರು ವಿಮಾನ ದುರಂತ…

admin by admin
May 21, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಮಂಗಳೂರು, ಮೇ 21 : ಅಂದು ಮೇ 22, 2010, ಸಮಯ ಸುಮಾರು ಆರು ಗಂಟೆ.. ದುಬೈನಿಂದ 166 ಮಂದಿ ಕರಾವಳಿಗರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ, ಕಡಲತಡಿ ಮಂಗಳೂರು ತಲುಪಿತ್ತು. ಬೆಳಗಿನ ಸವಿ ನಿದ್ದೆಯಲ್ಲಿದ್ದ ಕರಾವಳಿಗರು, ತಾಯ್ನಾಡಿಗೆ ಬಂದ ಖುಷಿಯಲ್ಲಿದ್ದರು. ನಮಗಾಗಿ ಕಾಯುತ್ತಿರುವ ಕುಟುಂಬ ವರ್ಗ, ಸ್ನೇಹಿತರನ್ನು ನೆನೆದು ಅವರನ್ನು ನೋಡುವ ತವಕದಲ್ಲಿದ್ದರು. ದುಬೈನಿಂದ ರಾತ್ರಿ 02. 36ಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಯಲ್ಲಿ ಇಳಿಯಲು ನೋಡುತ್ತಿತ್ತು, ಎಲ್ಲಾ ಸುರಕ್ಷಾ ಸಂಕೇತಗಳನ್ನು ವಿನಿಮಯ ಮಾಡುತ್ತಾ ರನ್ ವೇ ಬಂದಿಳಿದು ನಿಲ್ಲಲು ನೋಡುತ್ತಿದ್ದಂತೆ… ಅದೇನು ಆಯಿತೋ ಗೊತ್ತಿಲ್ಲ, ರನ್ ವೇ ಯಲ್ಲಿ ನಿಲ್ಲದ ವಿಮಾನ ಮುಂದಕ್ಕೆ ಚಲಿಸುತ್ತಾ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ, ಆಳದ ಕಣಿವೆಗೆ ಬಿದ್ದು ಬಿಟ್ಟಿತು. ಹೊರಗೆ, ವಿಮಾನದಿಂದ ಇಳಿದು ಬರುವ ತಮ್ಮವರಿಗಾಗಿ ಕಾಯುತ್ತಾ ಕುಳಿತಿದ್ದ ಕುಟುಂಬ ವರ್ಗ, ಸ್ನೇಹಿತರ ವರ್ಗಕ್ಕೆ ದೊಡ್ಡದಾದ ಸದ್ದೊಂದು ಅಪಾಯ ನಡೆದಿರುವ ಮುನ್ಸೂಚನೆ ನೀಡಿತು.

ಇತ್ತ ದೊಡ್ಡ ಸದ್ದಿನೊಂದಿಗೆ ಕಣಿವೆಗೆ ಬಿದ್ದ ವಿಮಾನವು ಧಗ ಧಗನೇ ಹೊತ್ತಿ ಉರಿಯ ತೊಡಗಿತು. ನೋಡ ನೋಡುತ್ತಿದ್ದಂತೆ 158 ಮಂದಿಯ ಜೀವವನ್ನು ಈ ವಿಮಾನ ದುರಂತ ಬಲಿ‌ ತೆಗೆದು ಕೊಂಡಿತು. 22 ಶವಗಳು ಸುಟ್ಟು ಕರಕಲಾದ ಕಾರಣ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ವಿಮಾನ ನಿಲ್ದಾಣಕ್ಕೆ ತಮ್ಮವರನ್ನು ಕರೆದೊಯ್ಯಲು ಬಂದಿದ್ದವರು ಅವರ ಹೆಣದೊಂದಿಗೆ ಮರಳುವಂತಾಯಿತು. ಈ ವಿಮಾನ ದುರಂತದಲ್ಲಿ ಪೈಲಟ್, ಸಿಬ್ಬಂದಿಗಳು ಸೇರಿ 158 ಮಂದಿ ಮೃತಪಟ್ಟಿದ್ದು, 135 ಮಂದಿ ವಯಸ್ಕರು, 6 ಮಂದಿ ವಿಮಾನ ಸಿಬ್ಬಂದಿಗಳು, 19 ಮಂದಿ ಮಕ್ಕಳು ಮತ್ತು 4 ಶಿಶುಗಳು ಸೇರಿ 166 ಮಂದಿ ಪ್ರಯಾಣಿಸುತ್ತಿದ್ದರು.

Related posts

Try this one thing and Goddess Lakshmi of good fortune will knock on your door..

ಈ ಒಂದು ಕೆಲಸ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಅದೃಷ್ಟದ ಲಕ್ಷ್ಮಿ ನಿಮ್ಮ ಮನೆ ಬಾಗಿಲನ್ನ ತಟ್ಟುತ್ತಾಳೆ …

February 12, 2026
cm cup badminton league 2026

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ – ನಾವೆಲ್ಲಾ ಒಂದಾಗಿ.. ಹೊಸ ಇತಿಹಾಸ ಬರೆಯೋಣ..!

February 12, 2026

ದುರಂತಕ್ಕೀಡಾದ ವಿಮಾನ, ಅಮೆರಿಕದ ಬೋಯಿಂಗ್ ಕಂಪೆನಿಯ 737-800 ಎರಡು ಅವಳಿ ಎಂಜಿನ್ ಗಳ ಅತ್ಯಾಧುನಿಕ ತಂತ್ರಜ್ಞಾನದ ವಿಮಾನ. ಈ ವಿಮಾನವು ಪ್ರತಿದಿನ ಮಂಗಳೂರಿನಿಂದ ದುಬೈಗೆ ಮತ್ತು ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತದೆ.  ಅಂದು ನಡೆದ ಮಂಗಳೂರು ವಿಮಾನ ದುರ್ಘಟನೆಗೆ ಕಾರಣ ಸಹ ಪೈಲಟ್ ನ ಸಲಹೆಗಳನ್ನು ಪಾಲಿಸದ ಮುಖ್ಯ ಪೈಲಟ್ ನ ನಿರ್ಲಕ್ಷ್ಯ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ. ಮುಖ್ಯ ಪೈಲಟ್ ಸರ್ಬಿಯಾದ ಕ್ಯಾಪ್ಟನ್ ಜಟ್ಕೋ ಗೆ ವಿಮಾನವನ್ನು ಮತ್ತೊಂದು ಸುತ್ತು ಹಾರಾಟ ನಡೆಸುವಂತೆ ಸಹ ಪೈಲಟ್ ಎಚ್. ಎಸ್. ಅಹ್ಲುವಾಲಿಯ ಹೇಳಿದ್ದು, ಅದನ್ನು ಪೈಲಟ್ ಕಿವಿಗೊಡದಿರುವುದು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ನಲ್ಲಿ ದಾಖಲಾಗಿದೆ. ಕೊನೆಯ ಕ್ಷಣದಲ್ಲಿ ನಮಗೆ ರನ್ ವೇ ಮುಗಿದಿದೆ ಎಂಬ ಧ್ವನಿಯ ನಂತರ ದೊಡ್ಡದಾಗಿ ವಿಮಾನ ಸ್ಪೋಟಿಸಿರುವ ಶಬ್ದ ದಾಖಲಾಗಿದೆ.

ಇದು ನಡೆದು ಇಂದಿಗೆ 10 ವರ್ಷಗಳು ಕಳೆದಿದೆ. ಆದರೆ ಮಂಗಳೂರಿಗರ ಪಾಲಿಗೆ ಇದು ಇನ್ನೂ ಕಹಿಯಾದ ದಿನವಾಗಿ ನೆನಪಿನಲ್ಲಿ ಉಳಿದಿದೆ. ದುರಂತ ಸಂಭವಿಸಿದ ಸ್ಥಳದಲ್ಲಿ ಮೃತರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸಲಾಗಿದ್ದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. 2 ವರ್ಷದ ಹಿಂದೆ ಈ ವಿವಾದ ಬಗೆಹರಿದಿದ್ದು, ಕೂಳೂರು ಸಮೀಪದ ‌ತಣ್ಣಿರು ಬಾವಿಗೆ ತೆರಳುವ ರಸ್ತೆ ‌ಪಕ್ಕದ 90 ಸೆಂಟ್ಸ್ ಜಾಗದಲ್ಲಿ 22/5 ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿ ವರ್ಷ ಮೇ 22 ರಂದು ಇಲ್ಲಿ ಶ್ರದ್ಧಾಂಜಲಿ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತದೆ.

Tags: Air India ExpressMangalore
ShareTweetSendShare
Join us on:

Related Posts

Try this one thing and Goddess Lakshmi of good fortune will knock on your door..

ಈ ಒಂದು ಕೆಲಸ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಅದೃಷ್ಟದ ಲಕ್ಷ್ಮಿ ನಿಮ್ಮ ಮನೆ ಬಾಗಿಲನ್ನ ತಟ್ಟುತ್ತಾಳೆ …

by admin
February 12, 2026
0

ಕೆಲವೊಬ್ಬರ ಮನೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಆಕಸ್ಮಿಕವಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿಹೋಗುತ್ತದೆ. ಇಷ್ಟೇ ಅಲ್ಲದೆ ಕೆಲವೊಂದು ಬಾರಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತಮ್ಮದೇ ಮನೆಯಲ್ಲಿ...

cm cup badminton league 2026

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ – ನಾವೆಲ್ಲಾ ಒಂದಾಗಿ.. ಹೊಸ ಇತಿಹಾಸ ಬರೆಯೋಣ..!

by admin
February 12, 2026
0

ನಾವೆಲ್ಲಾ ಒಂದಾಗಿ ಆಟನಾ ಆಡೋಣ... ಜೊತೆಯಾಗಿ ಆಡುತ್ತಾ ಸ್ನೇಹನಾ ಬೆಳೆಸೋಣ..ಅದಕ್ಕಾಗಿ ಸೇರೋಣ.. ಒಂದಾಗಿ ಗೆಲ್ಲೋಣ... ಸೌರ್ಹಾದತೆಯ ಸಂದೇಶವನ್ನು ಸಾರೋಣ.. ಹೊಸ ಪರಂಪರೆಗೆ ಮುನ್ನಡಿ ಬರೆಯೋಣ...! ಶಟಲ್ ಕಾಕ್‍ನ...

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

by Shwetha
February 12, 2026
0

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ 118 ವಿರೋಧ ಪಕ್ಷದ ಸಂಸದರು ಸಲ್ಲಿಸಿದ್ದ ಪದಚ್ಯುತಿ ನೋಟಿಸ್‌ನಲ್ಲಿ ತಾಂತ್ರಿಕ ದೋಷಗಳು ಪತ್ತೆಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ....

ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

by Shwetha
February 12, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಒಳಜಗ್ಗಾಟ ಇದೀಗ ದೆಹಲಿಗೆ ಶಿಫ್ಟ್ ಆದಂತಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಗರಿಗೆದರಿದ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿಕೆ...

ಅಪ್ಪನಿಗೆ ಕೊಕ್, ಮಗನಿಗೆ ಟಿಕೆಟ್? ದಳಪತಿಯ ಹೊಸ ದಾಳಕ್ಕೆ ಬೆಚ್ಚಿಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ್ರು

ಅಪ್ಪನಿಗೆ ಕೊಕ್, ಮಗನಿಗೆ ಟಿಕೆಟ್? ದಳಪತಿಯ ಹೊಸ ದಾಳಕ್ಕೆ ಬೆಚ್ಚಿಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ್ರು

by Shwetha
February 12, 2026
0

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಬಾಕಿಯಿರುವಾಗಲೇ ಮೈಸೂರು ಭಾಗದ ರಾಜಕಾರಣ, ವಿಶೇಷವಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram