ಮಂಗಳೂರು: ಡಿಸೆಂಬರ್ 21 ರಿಂದ ಜನವರಿ 19 ರವರೆಗೆ ನಡೆಯುವ ಒಂದು ತಿಂಗಳ ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಪಾರ್ಕ್ನಲ್ಲಿ ಆಯೋಜಿಸಿರುವ ಮೊಟ್ಟ ಮೊದಲ ‘ರೋಬೋಟಿಕ್ ಬಟರ್ಫ್ಲೈ ಶೋ’ ಅನ್ನು ಶಾಸಕ ವೇದವ್ಯಾಸ್ ಕಾಮತ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭಾನುವಾರ ಉದ್ಘಾಟಿಸಿದರು.
ಪ್ರದರ್ಶನದ ವೈಶಿಷ್ಟ್ಯಗಳು:
– ರೋಬೋಟಿಕ್ ಚಿಟ್ಟೆಗಳು, ಇರುವೆಗಳು, ಜೇನು ನೊಣ್ಣ ಮತ್ತಿತರ ಚಿತ್ರಣಗಳು.
– ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ.
ಕಾರ್ಯಕ್ರಮದ ಉದ್ದೇಶ:
– ಚಿಟ್ಟೆಗಳ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕುರಿತು ಜಾಗೃತಿ ಮೂಡಿಸುವುದು.
– ಮಕ್ಕಳಿಗೆ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಚಿಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ.
ರಿಯಾಯಿತಿ:
ಶಾಲಾ ಮಕ್ಕಳಿಗೆ ಶೇಕಡಾ 50 ರಷ್ಟು ರಿಯಾಯಿತಿ.
ಪ್ರಮುಖ ಆಕರ್ಷಣೆ
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ.