ಮಂಗಳೂರು, ಮೇ 14: ಮಂಗಳವಾರ ರಾತ್ರಿ ದುಬೈನಿಂದ ಬಂದ ಅನಿವಾಸಿ ಭಾರತೀಯರನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದ ಆರೋಪಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.
ಹೋಟೆಲ್ ಕ್ವಾರಂಟೈನ್ ಗೆ ಸಂಬಂಧ ಪಟ್ಟ ಆರೋಪಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ನಾವು ಸರಕಾರದ ನಿಯಮದ ಪ್ರಕಾರ ಕ್ರಮ ತೆಗೆದುಕೊಂಡಿದ್ದು, ಎಲ್ಲಾ ಪ್ರಯಾಣಿಕರಿಗೂ ಇದರ ಬಗ್ಗೆ ಮಾಹಿತಿ ನೀಡಿದ್ದೇವೆ. ಹೋಟೆಲ್ ಗಳನ್ನು ಪ್ರಯಾಣಿಕರೇ ಆಯ್ಕೆ ಮಾಡಿಕೊಂಡಿದ್ದು, ಹೋಟೆಲ್ ಗಳ ದರವನ್ನು ಮೊದಲೇ ತಿಳಿಸಿದ್ದೆವು ಎಂದಿದ್ದಾರೆ.
ವಿಮಾನ ಲ್ಯಾಂಡಿಂಗ್ ಆದ ಬಳಿಕ ನಡೆದ ಪ್ರಕ್ರಿಯೆಗಳು ತಡವಾದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಇಂತಹ ಸಂದರ್ಭದಲ್ಲಿ ಏರ್ ಪೋರ್ಟ್ ಪ್ರಕ್ರಿಯೆಗಳು ತುಂಬಾ ತಡವಾಗಿ ನಡೆಯುತ್ತದೆ. ಒಂದು ಬಾರಿಗೆ ವಿಮಾನದಿಂದ 20 ಮಂದಿ ಮಾತ್ರ ಹೊರ ಬರಲು ಅವಕಾಶ ನೀಡಿದ್ದು, ಎಲ್ಲರ ಸ್ಕ್ರೀನಿಂಗ್ ನಡೆಯಬೇಕಾಗುತ್ತದೆ ಎಂದು ತಿಳಿಸಿದರು. ಮೊದಲ ವಿಮಾನದಲ್ಲಿ 40 ಮಂದಿ ಗರ್ಭಿಣಿ ಸ್ತ್ರೀಯರಿದ್ದು, ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸರ್ಕಾರ ಅನಿವಾಸಿ ಭಾರತೀಯರ ವಿಚಾರದಲ್ಲಿ, ನಿಯಮ ಸಡಿಲಿಕೆ ಮಾಡಿದ್ದು, ಗರ್ಭಿಣಿ, ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ರಿಯಾಯಿತಿ ನೀಡಿದೆ. ಸ್ವಾಬ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಅವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಾಳೆ ಭೂಮಿಗೆ ಆಗಮಿಸಲಿದ್ದಾರೆ ಸುನೀತಾ ವಿಲಿಯಮ್ಸ್ – ನಾಸಾ ಘೋಷಣೆ
ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಾಳೆ ಭೂಮಿಗೆ ಮರಳಲಿದ್ದಾರೆ. ಅವರು ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ನೋರ್ ಅವರೊಂದಿಗೆ ಮೇ 20ರ ಬುಧವಾರ ಮುಂಜಾನೆ 3:27ಕ್ಕೆ ಭೂಮಿ...