Mangalore : ಒಂದೇ ಕುಟುಂಬದ ನಾಲ್ವರು ಲಾಡ್ಜ್ ನಲ್ಲಿ ಆತ್ಮಹತ್ಯೆ…
ಸಾಲಭಾಧೆ ತಾಳಲಾರದೇ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆಎಸ್ ರಾವ್ ರೋಡ್ ಬಳಿಯ ಕರುಣಾ ಲಾಡ್ಜ್ ನಲ್ಲಿ ನಡೆದಿದೆ.
ಮೃತರನ್ನ ಮೈಸೂರು ಮೂಲದ ವಾಣಿವಿಲಾಸ ಬಡಾವಣೆ ನಿವಾಸಿ ದೇವೇಂದ್ರ (48), ನಿರ್ಮಲಾ(48) ಚೈತ್ರಾ(09), ಚೈತನ್ಯ (09) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ.
ಸಾಲಬಾಧೆ,ಸಾಲ ತೀರಿಸಲಾಗದೇ, ಸಾಲಗಾರರ ಒತ್ತಡದಿಂದ ಆತ್ಮಹತ್ಯೆ ಗೆ ಶರಣಾಗಿರುವುದಾಗಿ ಡೆತ್ ನೋಟ್ ಬರೆದಿಟ್ಟು ಎರಡು ಅವಳಿ ಹೆಣ್ಣು ಮಕ್ಕಳ ಸಹಿತ ಕಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಹೆಂಡತಿ ಮಕ್ಕಳಿಗೆ ವಿಷ ನೀಡಿ ನೇಣು ಬಿಗಿದು ದೇವೇಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎ. 27ರಂದು ಒಂದು ದಿನಕ್ಕಾಗಿ ರೂಮ್ ಬುಕ್ ಮಾಡಲಾಗಿತ್ತು. ನಂತರ ಕುಟುಂಬ ಎರಡು ದಿನಕ್ಕಾಗಿ ವಿಸ್ತರಣೆ ಮಾಡಿತ್ತು. ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬೆಳಗಿನ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
Mangalore: Four members of the same family committed suicide in the lodge.