mangalore ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದವರ ಬಂಧನ
ಮಂಗಳೂರು : ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇರೆಗೆ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಝಬೈರ್, ಇಬ್ರಾಹಿಂ, ಲತೀಪ್, ರಾಕೇಶ್ ಸೇರಿದಂತೆ ಒಟ್ಟು 6 ಜನರನ್ನ ಬಂಧನ ಮಾಡಲಾಗಿದೆ.
ಇವರು ಜಿಲ್ಲೆಯ ಮೂಡಬಿದಿರೆ, ಮೂಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಮಾತ್ರವಲ್ಲದೆ, ವಾಹನ ಸವಾರರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಸದ್ಯ ಪೊಲೀಸರು ಬಂಧಿತರಿಂದ ಕಾರು, ಏರ್ ಗನ್, ಚಿನ್ನಾಭರಣ ಸಹಿತ 41.82 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.









