Mangaluru : ಸುರತ್ಕಲ್ ಹತ್ಯೆ ಪ್ರಕರಣ, 2 ದಿನ ನಿಷೇದಾಜ್ಞೆ ಜಾರಿ – ಮದ್ಯ ಮಾರಾಟ ನಿಷೇಧ..
ಸುರತ್ಕಲ್ ಫ್ಯಾನ್ಸಿ ಸ್ಟೋರ್ ಮಾಲಿಕ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದೆಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಭಾನುವಾರ ಬೆಳಿಗ್ಗೆ 6 ರಿಂದ ಡಿ 27 ರ ವರೆಗೆ ಸುರತ್ಕಲ್ ಪಣಂಬೂರು ಬಜಪೆ ಕಾವೂರು ಸುತ್ತಮುತ್ತಲಿಮ ಪೊಲೀಸ್ ಠಾಣೆಗಳಲ್ಲಿ ಸೆಕ್ಷನ್ 144 ಹಾಕಿ ನಿಷೇಧಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಮದ್ಯ ಮಾರಟ ನಿಷೇಧವನ್ನ ಮಾಡಲಾಗಿದೆ.
ಫ್ಯಾನ್ಸಿ ಸ್ಟೋರ್ ಮಾಲಿಕ ಜಲೀಲ್ (42) ಎಂಬುವವರನ್ನ ಶನಿವಾರ ರಾತ್ರಿ ದುಷ್ಕರ್ಮಿಗಳು ಗ್ರಾಹಕರ ಸೋಗಿನಲ್ಲಿ ಬಂದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಕೂಡಲೇ ಅವರನ್ನ ಖಾಸಗಿ ಆಸ್ಪತ್ರಗೆ ಸೇರಿಸಲಾಯಿತಾದರೂ ಚಿಕಿತ್ಸ ಫಲಿಸದೆ ಸಾವನ್ನಪ್ಪಿದ್ದಾರೆ.
Mangaluru: Surathkal murder case, 2 days ban on sale of liquor.