Mangaluru : ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಸಿಬ್ಬಂದಿ ಗೆ ಚೂರಿ ಇರಿದು ಕೊಲೆ….
ಹೆಲ್ಮೆಟ್ ಧರಿಸಿ ಬಂದಿದ್ದ ಯುವಕನೊಬ್ಬ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಸಿಬ್ಬಂದಿ ಗೆ ಚೂರಿ ಇರಿದ ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಅತ್ತಾವರ ನಿವಾಸಿ 52 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ.
ರಾಘವೇಂದ್ರ ಆಚಾರ್ ಹಂಪನಕಟ್ಟೆ ಜ್ಯೂವೆಲರಿ ಶಾಪ್ ನಲ್ಲಿ ಕಳೆದ 7 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ, ಜುವೆಲ್ಲರಿ ಮಾಲಿಕ ಊಟಕ್ಕೆಂದು ತೆರಳಿದ್ದಾಗ ಈ ವ್ಯಕ್ತಿಯ ಅಂಗಡಿ ನೋಡಿಕೊಳ್ಳುತ್ತಿದ್ದ. ಈವೇಳೆ ಮಾಲಿಕ ವಾಪಸ್ ಬರುವಷ್ಟರಲ್ಲಿ ವ್ಯಕ್ತಿಯೊಬ್ಬ ಮುಸುಕು ಧರಿಸಿ ಬಂದು ಚೂರು ಇರಿದು ಪರಾರಿಯಾಗಿದ್ದನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರ ಅವರನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿಲ್ಲ.
Mangaluru: The staff was stabbed to death after breaking into a jewelery shop.