ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ವರುಣಾರ್ಭಟ ಜೋರಾಗಿದೆ. ಇತ್ತ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಲೇ ಇದೆ. ಇಂದು ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 194 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 6 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೂ ಮೃತಪಟ್ಟಿರುವ 6 ಮಂದಿಯೂ ಸಹ ಮಂಗಳೂರು ನಗರದ ನಿವಾಸಿಗಳೇ ಆಗಿದ್ದಾರೆ. ಈ ಮೂಲಕ ಕೊರೋನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ. ಇಂದು ಮಂಗಳೂರು ತಾಲೂಕಿನ 129 ಮಂದಿಗೆ ಇಂದು ಕೊರೋನಾ ಪಾಸಿಟಿವ್ ಬಂದಿದೆ, ಇದರ ಹೊರತಾಗಿ ಬೆಳ್ತಂಗಡಿಯ 16, ಪುತ್ತೂರಿನ 16, ಬಂಟ್ವಾಳದ 15, ಸುಳ್ಯದ 7 ಹಾಗೂ ಹೊರ ಜಿಲ್ಲೆಯಿಂದ ಬಂದ 11 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ILI ಪ್ರಕರಣದಲ್ಲಿ 98, ಸಂಪರ್ಕವೇ ಪತ್ತೆಯಾಗದ 69, ಪ್ರಾಥಮಿಕ ಸಂಪರ್ಕದಿಂದ 15, SARI ಪ್ರಕರಣದಿಂದ 12 ಮಂದಿಗೆ ಇಂದು ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 7,075 ಮಂದಿಗೆ ಸೋಂಕು ತಗುಲಿರುವು ದೃಢವಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ
ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ, ಪರಂಪರೆ ಮತ್ತು ಆಪತ್ಕಾಲದಲ್ಲಿ ಕೈಹಿಡಿಯುವ ಅತಿ ದೊಡ್ಡ ಆಸ್ತಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಲಿ ಅಥವಾ...








