ಪ್ರೀತಿಸಿದ್ದು ನಿಜವೇ.. ಆದ್ರೆ ಮನೆ ಬಿಟ್ಟು ಓಡಿ ಬರಲ್ಲ ಎಂದವಳಿಗೆ ಚಾಕು ಇರಿದ..!
ಮಂಗಳೂರು : ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿ ಮನೆ ಬಿಟ್ಟು ಬಂದು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆಗೆ ಚಾಕು ಇರಿದಿದ್ದಾನೆ. ಮದುವೆಯಾಗಲು ಪ್ರೀತಿಸಿದ ಯುವತಿ ಮನೆ ಬಿಟ್ಟು ಬರಲಿಲ್ಲ ಎಂಬ ಕಾರಣಕ್ಕೆ ಪ್ರಿಯಕರ ತನ್ನ ಲವರ್ ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಇಂತಹದೊಂದು ಘಟನೆ ದಕ್ಷಿಣಕನ್ನಡದ ಲಾಯ್ಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ.
ಪುಂಜಾಲಕಟ್ಟೆ ಸಮೀಪದ ಶಮೀರ್ ಎಂಬ ಯುವಕ ಪುತ್ರಬೈಲು ನಿವಾಸಿಯಾದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಏಪ್ರಿಲ್ 06 ರಂದು ರಾತ್ರಿ ತನ್ನ ಲವರ್ ಮನೆಗೆ ತೆರಳಿದ್ದ ಶಮೀರ್ ಮದುವೆಯಾಗಲು ಮನೆ ಬಿಟ್ಟು ಬರಬೇಕು ಎಂದು ಆಕೆಗೆ ಒತ್ತಾಯಿಸಿದ್ದಾನೆ.
ಆದ್ರೆ ಯುವತಿ ಮನೆ ಬಿಟ್ಟು ಬರಲು ನಿರಾಕರಿಸಿದ್ದಾಳೆ. ಹೀಗಾಗಿ ಶಮೀರ್ ಕೋಪದಲ್ಲಿ ಆಕೆಯ ಮನೆಗೆ ನುಗ್ಗಿದ್ದಾನೆ. ಬಳಿಕ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಪೋಷಕರು ಕೂಡಲೇ ಆಕೆಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪತ್ನಿಯ ನಡೆತೆ ಅನುಮಾನಿಸಿ 8 ತಿಂಗಳ ಮಗುವಿನ ಜೀವ ತೆಗೆದ ಪಾಪಿ..!
ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಕೊಂದ ಪತಿ..!
ಮದುವೆಯಾಗುವುದಾಗಿ ನಂಬಿಸಿ ಅನೇಕ ಯುವತಿಯರಿಗೆ ವಂಚಿಸಿದ್ದ ನಕಲಿ ಸೇನಾಧಿಕಾರಿ ಅಂದರ್..!








