ವಿಶ್ವದ ದುಬಾರಿ ಮಾವಿನ ಹಣ್ಣು ಕಾವಲಿಗೆ ಶಕ್ತಿಶಾಲಿ ಭದ್ರತಾ ಪಡೆ ನಿಯೋಜನೆ
ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ದಂಪತಿಯೊಂದು ವಿಶ್ವದ ದುಬಾರಿ ಮಿಯಾಸಾಕಿ ಮಾವಿನ ಹಣ್ಣನ್ನ ಬೆಳೆದಿದ್ದು, ಇದರ ಕಾವಲು ಕಾಯಲು ಶಕ್ತಿಶಾಲಿ ಭದ್ರತಾ ಪಡೆಯನ್ನ ನಿಯೋಜನೆ ಮಾಡಿದ್ದಾರೆ.. ಹೌದು.. ತಮ್ಮ ತೋಟದಲ್ಲಿ ಬೆಳೆದ ಮಿಯಾಸಾಕಿ ಮಾವಿನ ಹಣ್ಣಿನ ಭದ್ರತೆಗೆ 4 ಭದ್ರತಾ ಸಿಬ್ಬಂದಿ ಹಾಗೂ 6 ಕಾವಲುನಾಯಿಗಳನ್ನು ನಿಯೋಜಿಸಿದ್ದಾರೆ. ಯಾಕೆಂದರೆ ಈ ತಳಿಯ ಮಾವಿನಹಣ್ಣು ವಿಶ್ವದ ದುಬಾರಿ ಹಣ್ಣು ಎಂಬ ದಾಖಲೆಗೆ ಪಾತ್ರವಾಗಿದೆ. ಜಪಾನ್ ನ ಒಂದು ಊರಿನ ಹೆಸರು ಈ ಮಾವಿನಹಣ್ಣಿಗೆ ಇಡಲಾಗಿದೆ.
1 ಕಿ.ಗ್ರಾಂ ಮಿಯಾಸಕಿ ಮಾವಿನ ಹಣ್ಣಿಗೆ ಮುಂಬೈಯ ಗ್ರಾಹಕರೊಬ್ಬರು 21,000 ರೂ. ಬೆಲೆಕಟ್ಟಿದ್ದಾರೆ ಎಂದು ದಂಪತಿ ಹೇಳಿದ್ದಾರೆ. ಕಳೆದ ವರ್ಷ ಜಪಾನ್ ಮೂಲದ ಈ ಅಸಾಮಾನ್ಯ ಮಾವಿನಹಣ್ಣಿನ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿ.ಗ್ರಾಂಗೆ 2.70 ಲಕ್ಷ ರೂ. ಆಗಿತ್ತು. ಕಡುಗೆಂಪು ಬಣ್ಣ ಮತ್ತು ಆಕಾರದಿಂದಾಗಿ ಈ ಮಾವಿನಹಣ್ಣಿಗೆ ಬಿಸಿಲಿನ ಮೊಟ್ಟೆ ಎಂಬ ಅಡ್ಡಹೆಸರೂ ಇದೆ. ಈ ಮಾವಿನಹಣ್ಣಿನ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆಯೇ ಮಾವಿನಹಣ್ಣು ಕದಿಯುವ ಪ್ರಯತ್ನ ಹಲ ಬಾರಿ ನಡೆದಿದೆ. ಹೀಗಾಗಿ ದಂಪತಿ 6 ಕಾವಲು ಕಾಯಿಗಳು ಹಾಗೂ 4 ಜನ ಭದ್ರತಾ ಸಿಬ್ಬಂದಿಯನ್ನ ರಕ್ಷಣೆಗಾಗಿ ನಿಯೋಜನೆ ಮಾಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








